alex Certify
ಕನ್ನಡ ದುನಿಯಾ       Mobile App
       

Kannada Duniya

ಧೋನಿ ಬಗ್ಗೆ ಮಗಳು ಹೇಳಿದ್ದೇನು? 17 ಲಕ್ಷಕ್ಕೂ ಹೆಚ್ಚು ಬಾರಿ ವಿಡಿಯೋ ವೀಕ್ಷಣೆ

ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಸದ್ಯ ವಿಶ್ರಾಂತಿಯಲ್ಲಿದ್ದಾರೆ. ಇಂಗ್ಲೆಂಡ್ ಪ್ರವಾಸ ಮುಗಿಸಿ ಬಂದಿರುವ ಧೋನಿ, ಪತ್ನಿ ಸಾಕ್ಷಿ ಹಾಗೂ ಮಗಳು ಜೀವಾ ಜೊತೆ ಎಂಜಾಯ್ ಮಾಡ್ತಿದ್ದಾರೆ. ಧೋನಿ ಇನ್ಸ್ಟ್ರಾಗ್ರಾಮ್ ಅಕೌಂಟ್ ನಲ್ಲಿ ಮಗಳು ಜೀವಾ ಜೊತೆಗಿರುವ ವಿಡಿಯೋ ಒಂದನ್ನು ಹಾಕಿದ್ದಾರೆ.

ಎಂದಿನಂತೆ ಈ ವಿಡಿಯೋದಲ್ಲಿ ಮಗಳ ಜೊತೆ ಧೋನಿ ಆಟವಾಡ್ತಿದ್ದಾರೆ. ಬಲೂನ್ ಹಿಡಿದು ಧೋನಿ ಮಗಳ ಜೊತೆ ಆಡ್ತಿದ್ರೆ ಸಾಕ್ಷಿ ಇದ್ರ ವಿಡಿಯೋ ಮಾಡಿದ್ದಾರೆ. ಜೊತೆಗೆ ಸಾಕ್ಷಿ, ಅಪ್ಪ ಒಳ್ಳೆಯವರಾ? ಕೆಟ್ಟವರಾ? ಎಂದು ಪ್ರಶ್ನೆ ಮಾಡ್ತಾರೆ. ಇದಕ್ಕೆ ಜೀವಾ ಮುದ್ದು ಮುದ್ದಾಗಿ ಎಲ್ಲರೂ ಒಳ್ಳೆಯವರು ಎನ್ನುತ್ತಾಳೆ. ಮೂರ್ನಾಲ್ಕು ಬಾರಿ ಇದನ್ನೇ ಪುನರುಚ್ಚರಿಸುತ್ತಾಳೆ. ಜೀವಾ ಈ ವಿಡಿಯೋ ಅಭಿಮಾನಿಗಳಿಗೆ ತುಂಬಾ ಇಷ್ಟವಾಗಿದೆ.

ಇನ್ಟ್ರಾಗ್ರಾಮ್ ನಲ್ಲಿರುವ ಈ ವಿಡಿಯೋವನ್ನು 17 ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಣೆ ಮಾಡಲಾಗಿದೆ. ಸಾಕ್ಷಿ ಹಾಗೂ ಧೋನಿ ಆಗಾಗ ಮಗಳ ಫೋಟೋ, ವಿಡಿಯೋಗಳನ್ನು ಸಾಮಾಜಿಕ ಜಾಲತಾಣಕ್ಕೆ ಹಾಕ್ತಿರುತ್ತಾರೆ. ಧೋನಿ ಅಭಿಮಾನಿಗಳಿಗೆ ಧೋನಿ ಮಗಳ ಮುಗ್ಧ ಮಾತು ಕೇಳೋದು ತುಂಬಾ ಇಷ್ಟ.

Very smart

A post shared by M S Dhoni (@mahi7781) on

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...