alex Certify
ಕನ್ನಡ ದುನಿಯಾ       Mobile App
       

Kannada Duniya

ಪಾಕ್ ವಿರುದ್ಧದ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯಗೆ ಗಾಯ

ನಿನ್ನೆ ಏಷ್ಯಾಕಪ್ ಕ್ರಿಕೆಟ್ ಟೂರ್ನಿಯ ಹೈವೋಲ್ಟೇಜ್ ಪಂದ್ಯದಲ್ಲಿ ಟೀಮ್ ಇಂಡಿಯಾ ಹಾಗೂ ಪಾಕಿಸ್ತಾನ ತಂಡಗಳು ಕಾದಾಟ ನಡೆಸಿದವು. ಈ ಪಂದ್ಯದಲ್ಲಿ ಸ್ಥಾನ ಪಡೆದಿದ್ದ ಹಾರ್ದಿಕ್ ಪಾಂಡ್ಯ, ತಮ್ಮ ಮೇಲೆ ಇಟ್ಟ ನಂಬಿಕೆಗೆ ಪೂರಕವಾಗಿ ಬೌಲಿಂಗ್ ಮಾಡಿದ್ರು. ಆದ್ರೆ, ಬೆನ್ನು ನೋವಿನಿಂದ ಬಳಲಿ ಅಂಗಳದಿಂದ ಹೊರ ನಡೆದ್ರು.

ಪಂದ್ಯದ 18ನೇ ಓವರ್ ಬೌಲ್ ಮಾಡುತ್ತಿದ್ದ ಪಾಂಡ್ಯ, ಐದನೇ ಎಸೆತ ಮಾಡಿದ ಬಳಿಕ ಪಿಚ್ ನಲ್ಲೇ ಕುಸಿದು ಬಿದ್ದರು. ಅಂಗಳದಲ್ಲಿದ್ದ ಟೀಮ್ ಇಂಡಿಯಾ, ಪಾಕ್ ಆಟಗಾರರು ಹಾರ್ದಿಕ್ ರತ್ತ ಧಾವಿಸಿದ್ರು. ಅಂಪೈಯರ್ ವೈದ್ಯಕೀಯ ಸಿಬ್ಬಂದಿ ಬರುವಂತೆ ತಿಳಿಸಿದ್ರು.  ತೀವ್ರ ನೋವಿನಿಂದ ಬಳಲುತ್ತಿದ್ದ ಪಾಂಡ್ಯರನ್ನ ಸಿಬ್ಬಂದಿ, ಸ್ಟ್ರೆಚರ್ ಮೂಲಕ ಪೆವಿಲಿಯನ್‌ಗೆ ಕರೆದುಕೊಂಡ್ರು ಹೋದ್ರು.

ಸೀಮಿತ ಓವರ್‌ಗಳಲ್ಲಿ ತಂಡದ ಭರವಸೆಯ ಆಟಗಾರ ಆಗಿರುವ ಹಾರ್ದಿಕ್ ಗೆ ಬಿಸಿಸಿಐ ವೈದ್ಯಕೀಯ ಸಿಬ್ಬಂದಿ ಚಿಕಿತ್ಸೆ ನೀಡುತ್ತಿರೋದಾಗಿ ಬಿಸಿಸಿಐ ತಿಳಿಸಿದೆ. ಅಲ್ಲದೆ ಹಾರ್ದಿಕ್ ನಾಳೆಯ ಪಂದ್ಯದಲ್ಲಿ ಕಣಕ್ಕೆ ಇಳಿಯೋದು ಡೌಟ್ ಎನ್ನಲಾಗುತ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...