alex Certify
ಕನ್ನಡ ದುನಿಯಾ       Mobile App
       

Kannada Duniya

ಹಾಕಿ ವಿಶ್ವಕಪ್ ಗೆ ತಂಡ ಕಳುಹಿಸಲು ಹಣವಿಲ್ಲ

ಪಾಕಿಸ್ತಾನದ ಆರ್ಥಿಕ ಪರಿಸ್ಥಿತಿ ಬಗ್ಗೆ ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಪಾಕಿಸ್ತಾನದ ಆರ್ಥಿಕ ಪರಿಸ್ಥಿತಿ ತುಂಬಾ ಹದಗೆಟ್ಟಿದ್ದು, ಸಹಾಯಕ್ಕಾಗಿ ನೆರೆ ರಾಷ್ಟ್ರಗಳನ್ನು ಪ್ರಾರ್ಥಿಸಲಾಗುತ್ತಿದೆ. ಪ್ರಧಾನಿ ಇಮ್ರಾನ್ ಖಾನ್ ಕೆಲ ದಿನಗಳ ಹಿಂದೆ ಚೀನಾಕ್ಕೆ ಹೋಗಿ ಫಂಡ್ ಬಗ್ಗೆ ಮಾತುಕತೆ ನಡೆಸಿದ್ದರು. ಆರ್ಥಿಕ ಪರಿಸ್ಥಿತಿ ಪಾಕಿಸ್ತಾನದ ಹಾಕಿ ತಂಡದ ಮೇಲೂ ಆಗಿದೆ.

ಹಣವಿಲ್ಲದ ಕಾರಣ ಪಾಕಿಸ್ತಾನದ ಹಾಕಿ ತಂಡ ವಿಶ್ವಕಪ್ ನಲ್ಲಿ ಆಡೋದು ಅನುಮಾನ. ನವೆಂಬರ್ 28 ರಿಂದ ಭುವನೇಶ್ವರದಲ್ಲಿ ಹಾಕಿ ವಿಶ್ವಕಪ್ ನಡೆಯುತ್ತಿದೆ. ಭಾರತ-ಪಾಕಿಸ್ತಾನದ ಸಂಬಂಧ ಮೊದಲೇ ಸರಿಯಿಲ್ಲ. ಪಾಕಿಸ್ತಾನ ತಂಡ ವಿಶ್ವಕಪ್ ನಿಂದ ಹೊರಗಿದ್ರೆ ಒಳ್ಳೆಯದು ಎಂಬ ಅಭಿಪ್ರಾಯವೂ ಕೇಳಿ ಬರ್ತಿದೆ.

ಮೂಲಗಳ ಪ್ರಕಾರ, ಪಾಕಿಸ್ತಾನದ ಬಳಿ ಹಾಕಿ ತಂಡವನ್ನು ಭಾರತಕ್ಕೆ ಕಳುಹಿಸಲು ಹಣವಿಲ್ಲವಂತೆ. ಪಾಕಿಸ್ತಾನದ ಹಾಕಿ ಫೆಡರೇಷನ್ ಕ್ರಿಕೆಟ್ ಬೋರ್ಡ್ ನಿಂದ ಸಹಾಯ ಕೇಳಿತ್ತು. ಆದ್ರೆ ಕ್ರಿಕೆಟ್ ಮಂಡಳಿ ಆರ್ಥಿಕ ಪರಿಸ್ಥಿತಿಯೇ ಸರಿಯಿಲ್ಲ. ಇಂತಹ ಪರಿಸ್ಥಿತಿಯಲ್ಲಿ ನಿಮಗೆ ಸಹಾಯ ಮಾಡೋದು ಹೇಗೆ ಎಂದು ಕ್ರಿಕೆಟ್ ಮಂಡಳಿ ಪ್ರಶ್ನೆ ಮಾಡಿದೆ.

ಇನ್ನು ಹಾಕಿ ಫೆಡರೇಷನ್ ಪಾಕಿಸ್ತಾನದ ಪ್ರಧಾನಿಗೂ ಹಣ ನೀಡುವಂತೆ ಮನವಿ ಮಾಡಿದೆ. 8.2 ಕೋಟಿ ರೂಪಾಯಿಯನ್ನು ನೀಡಬೇಕೆಂದು ಹೇಳುತ್ತಿದೆ. ಆದ್ರೆ ಪಾಕಿಸ್ತಾನ ಸರ್ಕಾರದಿಂದ ಯಾವುದೇ ಉತ್ತರ ಬಂದಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...