alex Certify
ಕನ್ನಡ ದುನಿಯಾ       Mobile App
       

Kannada Duniya

ಕೊಹ್ಲಿ-ಧೋನಿಗೆ ಪಾಕ್ ಅಭಿಮಾನಿಗಳಿಂದ ಆಹ್ವಾನ

ಪಾಕಿಸ್ತಾನದಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳು ನಡೆಯುವ ಸಾಧ್ಯತೆ ದಟ್ಟವಾಗಿದೆ. 2009 ರಲ್ಲಿ ಶ್ರೀಲಂಕಾ ತಂಡದ ಮೇಲೆ ಪಾಕಿಸ್ತಾನದಲ್ಲಿ ನಡೆದ ಭಯೋತ್ಪಾದನಾ ದಾಳಿ ನಂತ್ರ ಪಾಕ್ ಪ್ರವಾಸಕ್ಕೆ  ಬಹುತೇಕ ರಾಷ್ಟ್ರಗಳು ಒಲ್ಲೆ ಎಂದಿದ್ದವು. ಪಾಕ್ ನಲ್ಲಿ ಆಟಗಾರರಿಗೆ ರಕ್ಷಣೆಯಿಲ್ಲ ಎಂಬುದು ಅವ್ರ ವಾದವಾಗಿತ್ತು.

2015 ರಲ್ಲಿ ಜಿಂಬಾಬ್ವೆ ಏಕದಿನ ಸರಣಿಯನ್ನು ಪಾಕ್ ನೆಲದಲ್ಲಿ ಆಡಿತ್ತು. ಈ ವೇಳೆ ಮ್ಯಾಚ್ ರೆಫರಿ ಹಾಗೂ ಅಂಪೈರ್ ಗಳನ್ನು ಪಾಕಿಸ್ತಾನಕ್ಕೆ ಕಳುಹಿಸಲು ಬಿಸಿಸಿಐ ನಿರಾಕರಿಸಿತ್ತು. ಈಗ ವರ್ಲ್ಡ್ ಇಲೆವೆನ್ ಟೀಂ ಮೂರು ಟಿ-20 ಪಂದ್ಯಗಳನ್ನಾಡಲು ಪಾಕಿಸ್ತಾನಕ್ಕೆ ತೆರಳಿದೆ. ಈ ಪಂದ್ಯದ ನಂತ್ರ ಪಾಕ್ ನಲ್ಲಿ ಅಂತರಾಷ್ಟ್ರೀಯ ಪಂದ್ಯಗಳು ನಡೆಯುವ ಸಾಧ್ಯತೆಗಳಿವೆ.

ಟಿ-20 ಪಂದ್ಯ ವೀಕ್ಷಿಸಲು ಪಾಕ್ ಕ್ರಿಕೆಟ್ ಅಭಿಮಾನಿಗಳು ಉತ್ಸುಕರಾಗಿದ್ದಾರೆ. ಮುಂದಿನ ದಿನಗಳಲ್ಲಿ ಅಂತರಾಷ್ಟ್ರೀಯ ಪಂದ್ಯಗಳು ನಡೆಯಲಿದ್ದು, ಧೋನಿ, ಕೊಹ್ಲಿಯಂತ ಆಟಗಾರರು ಮತ್ತೆ ಪಾಕ್ ಗೆ ಬರ್ತಾರೆಂಬ ಭರವಸೆ ಅವರಲ್ಲಿ ಮೂಡಿದೆ. ಟ್ವೀಟರ್ ಮೂಲಕ ತಮ್ಮ ಆಸೆಯನ್ನು ವ್ಯಕ್ತಪಡಿಸಿದ್ದಾರೆ. ನೆಚ್ಚಿನ ಆಟಗಾರರನ್ನು ಪಾಕಿಸ್ತಾನಕ್ಕೆ ಆಹ್ವಾನಿಸಿದ್ದಾರೆ.

ಲಾಹೋರ್ ಮೈದಾನ ಕೊಹ್ಲಿಗಾಗಿ ನಿರೀಕ್ಷೆಯಲ್ಲಿದೆ ಎಂದು ಒಬ್ಬರು ಟ್ವಿಟ್ ಮಾಡಿದ್ರೆ, ಧೋನಿ ಹಾಗೂ ಕೊಹ್ಲಿ ಬ್ಯಾಟಿಂಗ್ ನೋಡಲು ನಾವು ಕಾದು ಕುಳಿತಿದ್ದೇವೆಂದು ಇನ್ನೊಬ್ಬರು ಟ್ವಿಟ್ ಮಾಡಿದ್ದಾರೆ. ಪಾಕಿಸ್ತಾನದ ನೆಲದಲ್ಲಿ ನೀವು ಆಟವಾಡಿದ್ರೆ  ಈ ದೇಶದಲ್ಲಿ ಕ್ರಿಕೆಟ್ ಪುನಃಸ್ಥಾಪನೆಗೊಳ್ಳಲಿದೆ ಎಂದು ಮತ್ತೊಬ್ಬರು ಟ್ವಿಟ್ ಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...