alex Certify
ಕನ್ನಡ ದುನಿಯಾ       Mobile App
       

Kannada Duniya

ಭಾರತ ಗೆದ್ದಿದ್ದಕ್ಕೆ ಪಾಕಿಸ್ತಾನದಲ್ಲಿ ಟಿವಿ ಮೇಲೆ ಆಕ್ರೋಶ

Pakistani-fans-compressed-580x395

ಬಾಂಗ್ಲಾದೇಶದ ಮೀರ್ ಪುರ್ ನಲ್ಲಿ ನಡೆದ ಏಷ್ಯಾಕಪ್ ಟಿ-20 ಪಂದ್ಯದಲ್ಲಿ ಭಾರತದ ವಿರುದ್ಧ ಪಾಕಿಸ್ತಾನ ಸೋತಿರುವುದಕ್ಕೆ ಅಲ್ಲಿನ ಅಭಿಮಾನಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಂದ್ಯದಲ್ಲಿ ಪಾಕಿಸ್ತಾನ ಸೋಲುತ್ತಿದ್ದಂತೆ ಭಾರತದ ಅಭಿಮಾನಿಗಳು ಸಂಭ್ರಮಿಸಿದರು.

ಇತ್ತ ಸಂಭ್ರಮಾಚರಣೆ ನಡೆಯುತ್ತಿದ್ದರೆ, ಅಲ್ಲಿ ಆಕ್ರೋಶ ಸ್ಪೋಟಗೊಂಡಿತ್ತು. ಪಾರಂಪರಿಕ ಎದುರಾಳಿ ಭಾರತದ ಎದುರು ಪಾಕಿಸ್ತಾನ ಸೋಲು ಕಂಡಿದ್ದನ್ನು ಪಾಕ್ ಅಭಿಮಾನಿಗಳಿಗೆ ಸಹಿಸಿಕೊಳ್ಳಲು ಆಗಿಲ್ಲ. ಹಾಗಾಗಿ ಮನೆಯಲ್ಲಿದ್ದ ಟಿವಿಯನ್ನೆಲ್ಲಾ ಹೊರಗೆ ತೆಗೆದುಕೊಂಡು ಬಂದು ರಸ್ತೆಯಲ್ಲಿ ಎತ್ತಿಹಾಕಿದ್ದಾರೆ. ಹೀಗೆ ಹಲವಾರು ಅಭಿಮಾನಿಗಳು ಟಿವಿಯನ್ನು ರಸ್ತೆಗೆ ಎಸೆದು ಪಾಕ್ ಸೋಲಿಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ, ಪಾಕ್ ಕ್ರಿಕೆಟ್ ತಂಡದ ವಿರುದ್ಧ ಘೋಷಣೆ ಕೂಗಿದ್ದಾರೆ.

ಮೀರ್ ಪುರ್ ನಲ್ಲಿ ನಡೆದ ಪಂದ್ಯದಲ್ಲಿ ಪಾಕ್ ಮೊದಲು ಬ್ಯಾಟಿಂಗ್ ಮಾಡಿ 83 ರನ್ ಗಳಿಸಿತ್ತು. ನಿಗದಿತ ಓವರ್ ಮುಗಿಯುವ ಮೊದಲೇ ಪಾಕ್ ಆಲ್ ಔಟ್ ಆಗಿತ್ತು. 84 ರನ್ ಗೆಲುವಿನ ಗುರಿ ಬೆನ್ನತ್ತಿದ ಭಾರತ 5 ವಿಕೆಟ್ ಅಂತರದಿಂದ ಗೆಲುವು ಸಾಧಿಸಿತ್ತು. ಇದನ್ನು ವೀಕ್ಷಿಸುತ್ತಿದ್ದ ಪಾಕ್ ಅಭಿಮಾನಿಗಳು ಟಿವಿ ಒಡೆದು ಹಾಕಿ, ಬ್ಯಾಟ್ ಗಳಿಗೆ ಬೆಂಕಿ ಹಚ್ಚಿದ್ದಾರೆ. ಆಟಗಾರರ ವಿರುದ್ಧ ಘೋಷಣೆ ಕೂಗಿದ್ದಾರೆ ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...