alex Certify
ಕನ್ನಡ ದುನಿಯಾ       Mobile App
       

Kannada Duniya

ಪಾಕ್ ಅಭಿಮಾನಿಗಳು ಕೊಹ್ಲಿ ಮುಂದಿಟ್ಟಿದ್ದಾರೆ ಈ ಬೇಡಿಕೆ

ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯವರಿಗೆ ಭಾರತದಲ್ಲಿ ಮಾತ್ರವಲ್ಲ ವಿಶ್ವದಾದ್ಯಂತ ಅಭಿಮಾನಿಗಳಿದ್ದಾರೆ. ಅದರಲ್ಲೂ ನೆರೆ ರಾಷ್ಟ್ರ ಪಾಕಿಸ್ತಾನದಲ್ಲಿ ಹಲವು ಮಹಿಳಾ ಕ್ರಿಕೆಟರ್ ಗಳು ಕೊಹ್ಲಿ ಆಟಕ್ಕೆ ಫಿದಾ ಆಗಿದ್ದಾರೆ.

ಭಾರತದ ಐಪಿಎಲ್ ನಂತೆ ಪಾಕಿಸ್ತಾನ ಕೂಡಾ ಪಾಕಿಸ್ತಾನ್ ಸೂಪರ್ ಲೀಗ್ ಆರಂಭಿಸಿದ್ದು, ಆದರೆ ಪಂದ್ಯಾವಳಿಗಳನ್ನು ವೀಕ್ಷಿಸಲು ಪ್ರೇಕ್ಷಕರು ಆಗಮಿಸದೆ ಕ್ರೀಡಾಂಗಣಗಳು ಬಣಗುಡುತ್ತಿವೆ. ಹೀಗಾಗಿ ಇತ್ತೀಚೆಗೆ ನಡೆದ ಪಿಎಸ್ಎಲ್ ಪಂದ್ಯವೊಂದರ ವೇಳೆ ಪಾಕ್ ಅಭಿಮಾನಿಗಳು, ವಿರಾಟ್ ಕೊಹ್ಲಿ, ಪಾಕಿಸ್ತಾನ್ ಸೂಪರ್ ಲೀಗ್ ನಲ್ಲಿ ಪಾಲ್ಗೊಳ್ಳಲಿ ಎಂಬ ಬೇಡಿಕೆ ಇದ್ದ ಪೋಸ್ಟರ್ ಹಿಡಿದಿದ್ದರು.

ಇದನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಲಾಗಿದ್ದು, ಇದಕ್ಕೆ ಭಾರತೀಯ ಕ್ರಿಕೆಟ್ ಅಭಿಮಾನಿಗಳು ತಮಾಷೆಯಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಒಬ್ಬರು ಕೊಹ್ಲಿ ಬಲು ದುಬಾರಿ ಆಟಗಾರ. ಅವರ ಬೇಡಿಕೆ ಪೂರೈಸಲು ಪಿಎಸ್ಎಲ್ ಗೆ ಸಾಧ್ಯವೇ ಎಂದು ಪ್ರಶ್ನಿಸಿದರೆ ಮತ್ತೊಬ್ಬರು ಪಿಎಸ್ಎಲ್ ನಲ್ಲಿ ಕೊಹ್ಲಿ ಆಡುವುದನ್ನು ಕನಸಿನಲ್ಲೂ ನಿರೀಕ್ಷಿಸಬೇಡಿ ಎಂದಿದ್ದಾರೆ.

ಪಿಎಸ್ಎಲ್ ಜನಪ್ರಿಯಗೊಳಿಸಲು ಪಾಕ್ ಕ್ರಿಕೆಟ್ ಮಂಡಳಿ ಹತ್ತಾರು ಸರ್ಕಸ್ ಮಾಡುತ್ತಿದ್ದರೂ ಪ್ರಯೋಜನವಾಗುತ್ತಿಲ್ಲ. ಇದು ಮೂರನೇ ಪಿಎಸ್ಎಲ್ ಟೂರ್ನಿಯಾಗಿದ್ದು, ಈ ಬಾರಿ ಉದ್ಘಾಟನೆಯನ್ನು ಬಲು ಅದ್ದೂರಿಯಾಗಿ ನೆರವೇರಿಸಲಾಗಿತ್ತು. ಭದ್ರತೆ ಕಾರಣಕ್ಕೆ ಪಿಎಸ್ಎಲ್ ಪಂದ್ಯಗಳು ಯುಎಇ ನಲ್ಲಿ ನಡೆಯುತ್ತಿದ್ದು, ಹೀಗಾಗಿಯೇ ಪ್ರೇಕ್ಷಕರ ಕೊರತೆ ಎದುರಾಗಿದೆ ಎನ್ನಲಾಗುತ್ತಿದೆ. ಆದರೆ ಪಾಕಿಸ್ತಾನದ ನೆಲದಲ್ಲಿ ಆಡಲು ವಿದೇಶಿ ಆಟಗಾರರು ಹಿಂದೇಟು ಹಾಕುತ್ತಿರುವುದು ಪಂದ್ಯಾವಳಿ ಆಯೋಜಕರಿಗೆ ತಲೆನೋವಾಗಿ ಪರಿಣಮಿಸಿದೆ. ಆದರೂ ಈ ಬಾರಿ ಅಂತಿಮ ಮೂರು ಪಂದ್ಯಗಳನ್ನು ಪಾಕಿಸ್ತಾನದಲ್ಲಿ ನಡೆಸಲಾಗುತ್ತಿದ್ದು, ಕ್ರಿಕೆಟ್ ಅಭಿಮಾನಿಗಳ ಪ್ರತಿಕ್ರಿಯೆ ಹೇಗಿರುತ್ತದೆಂಬುದನ್ನು ಕಾದು ನೋಡಬೇಕಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...