alex Certify
ಕನ್ನಡ ದುನಿಯಾ       Mobile App
       

Kannada Duniya

ಪಾಕ್ ನಲ್ಲಿ ಇಮ್ರಾನ್ ಖಾನ್ ಮೇಲೆ ಶೂ ಎಸೆದು ಆಕ್ರೋಶ

ಪಾಕಿಸ್ತಾನದಲ್ಲಿ ಶೂ ಎಸೆಯುವ ಪ್ರಕರಣ ಮುಂದುವರೆದಿದೆ. ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಮತ್ತು ತೆಹ್ರಿಕ್-ಇ-ಇನ್ಸಾಫ್ ಪಾರ್ಟಿ ಅಧ್ಯಕ್ಷ ಇಮ್ರಾನ್ ಖಾನ್ ಮೇಲೆ ಶೂ ಎಸೆಯಲಾಗಿದೆ. ಘಟನೆ ಮಂಗಳವಾರ ನಡೆದಿದೆ. ಪಂಜಾಬ್ ಪ್ರಾಂತ್ಯದ ಗುಜರಾತ್ ನಗರದಲ್ಲಿ ರ್ಯಾಲಿಯನ್ನುದ್ದೇಶಿಸಿ ಮಾತನಾಡ್ತಿದ್ದ ಇಮ್ರಾನ್ ಖಾನ್ ಮೇಲೆ ಶೂ ಎಸೆಯಲಾಗಿದೆ.

ಶೂ ಇಮ್ರಾನ್ ಖಾನ್ ಗೆ ತಾಗಲಿಲ್ಲ. ಬದಲಾಗಿ ಇಮ್ರಾನ್ ಖಾನ್ ಬಲಬದಿ ನಿಂತಿದ್ದ ಪಕ್ಷದ ನಾಯಕ ಅಲಿಮ್ ಖಾನ್ ಗೆ ತಾಕಿದೆ. ವಾಹನದ ಮೇಲೆ ನಿಂತು ಜನರನ್ನು ಉದ್ದೇಶಿಸಿ ಮಾತನಾಡುವಾಗ ಈ ಘಟನೆ ನಡೆದಿದೆ. ಶೂ ಎಸೆದ ನಂತ್ರ ಇಮ್ರಾನ್ ಖಾನ್ ರ್ಯಾಲಿ ಬಂದ್ ಮಾಡಿದ್ರು ಎನ್ನಲಾಗಿದೆ.

ಪಾಕಿಸ್ತಾನದಲ್ಲಿ ಕಳೆದೊಂದು ವಾರದಿಂದ ಶೂ ಎಸೆಯುವ ಪ್ರಕರಣ ಹೆಚ್ಚಾಗಿದೆ. ಮೊದಲು ವಿದೇಶಾಂಗ ಸಚಿವರ ಮೇಲೆ ಶಾಯಿ ಎರಚಲಾಗಿತ್ತು. ನಂತ್ರ ಮಾಜಿ ಅಧ್ಯಕ್ಷ ನವಾಜ್ ಶರೀಫ್ ಮೇಲೆ ಶೂ ಎಸೆಯಲಾಗಿತ್ತು. ಈಗ ಇಮ್ರಾನ್ ಖಾನ್ ಮೇಲೆ ಶೂ ಎಸೆಯಲಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...