alex Certify
ಕನ್ನಡ ದುನಿಯಾ       Mobile App
       

Kannada Duniya

ಮೈದಾನದಲ್ಲೇ ಆತ್ಮಹತ್ಯೆಗೆ ಯತ್ನಿಸಿದ ಪಾಕ್ ಕ್ರಿಕೆಟಿಗ

ಪಾಕಿಸ್ತಾನದಲ್ಲಿ ನಡೆದ ಪಂದ್ಯವೊಂದರಲ್ಲಿ ಕ್ರಿಕೆಟ್ ಆಟಗಾರ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಆಯ್ಕೆ ಸಮಿತಿಯ ಸದಸ್ಯರು ತನಗೆ ಅವಕಾಶ ಕೊಡಲು ಲಂಚ ನೀಡುವಂತೆ ಬೇಡಿಕೆ ಇಟ್ಟಿದ್ದಾರೆಂದು ಆರೋಪಿಸಿದ್ದಾನೆ.

ಲಾಹೋರ್ ಮೈದಾನದಲ್ಲಿ ಫಸ್ಟ್ ಕ್ಲಾಸ್ ಕ್ರಿಕೆಟ್ ಪಂದ್ಯ ನಡೆಯುತ್ತಿತ್ತು. ನೇರವಾಗಿ ಮೈದಾನಕ್ಕೆ ನುಗ್ಗಿದ ವೇಗದ ಬೌಲರ್ ಗುಲಾಮ್ ಹೈದರ್ ಅಬ್ಬಾಸ್ ಮೈಮೇಲೆ ಪೆಟ್ರೋಲ್ ಸುರಿದುಕೊಂಡಿದ್ದಾನೆ. ಪ್ರೇಕ್ಷಕರು ಇದನ್ನು ಗಮನಿಸಿ ಕೂಡಲೇ ಭದ್ರತಾ ಸಿಬ್ಬಂದಿಗೆ ಮಾಹಿತಿ ನೀಡಿದ್ರು. ಕೂಡಲೇ ಆತ್ಮಹತ್ಯೆಗೆ ಮುಂದಾಗಿದ್ದ ಅಬ್ಬಾಸ್ ನನ್ನು ಪೊಲೀಸರು ತಡೆದಿದ್ದಾರೆ.

ಲಾಹೋರ್ ತಂಡದಲ್ಲಿ ಸ್ಥಾನ ಕೊಡುವುದಾಗಿ ಆಯ್ಕೆ ಸಮಿತಿ ಅಬ್ಬಾಸ್ ಗೆ ಭರವಸೆ ಕೊಡುತ್ತಲೇ ಬಂದಿತ್ತು. ವಲಯ ಮಟ್ಟದಲ್ಲಿ ಚೆನ್ನಾಗಿ ಆಡಿದ್ರೂ ತಾನು ಬಡವ ಅನ್ನೋ ಕಾರಣಕ್ಕೆ ನಿರ್ಲಕ್ಷಿಸಲಾಗಿದೆ ಅನ್ನೋದು ಅಬ್ಬಾಸ್ ಆರೋಪ. ಅಷ್ಟೇ ಅಲ್ಲ ಲಾಹೋರ್ ತಂಡದ ಪರ ಆಡಲು ಚಾನ್ಸ್ ಬೇಕಾದ್ರೆ ಲಂಚ ಕೊಡುವಂತೆ ಡಿಮ್ಯಾಂಡ್ ಮಾಡಿದ್ದಾರಂತೆ.

ಇದರಿಂದ ನೊಂದ ಅಬ್ಬಾಸ್ ಆತ್ಮಹತ್ಯೆ ನಿರ್ಧಾರಕ್ಕೆ ಬಂದಿದ್ದ. ಈಗಲೂ ತನ್ನ ಅಳಲನ್ನು ಪಾಕ್ ಕ್ರಿಕೆಟ್ ಮಂಡಳಿ ಆಲಿಸದೇ ಇದ್ರೆ ಗಡಾಫಿ ಸ್ಟೇಡಿಯಂನಲ್ಲೇ ಮೈಗೆ ಬೆಂಕಿ ಹಚ್ಚಿಕೊಳ್ಳೋದಾಗಿ ಎಚ್ಚರಿಕೆ ನೀಡಿದ್ದಾನೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...