alex Certify
ಕನ್ನಡ ದುನಿಯಾ       Mobile App
       

Kannada Duniya

ಚಿಕಿತ್ಸೆಗಾಗಿ ಭಾರತಕ್ಕೆ ಬರುವ ಇಚ್ಚೆ ಹೊಂದಿದ್ದ ಪಾಕ್ ಆಟಗಾರ ಇನ್ನಿಲ್ಲ

ಅನಾರೋಗ್ಯದಿಂದ ಬಳಲುತ್ತಿದ್ದ ಪಾಕಿಸ್ತಾನದ ಖ್ಯಾತ ಹಾಕಿ ಆಟಗಾರ ಮನ್ಸೂರ್ ಅಹ್ಮದ್ ತಮ್ಮ 50 ನೇ ವಯಸ್ಸಿನಲ್ಲಿ ಶನಿವಾರದಂದು ಸಾವನ್ನಪ್ಪಿದ್ದಾರೆ. 1994 ರ ವಿಶ್ವ ಕಪ್ ವಿಜೇತ ಪಾಕ್ ಹಾಕಿ ತಂಡದ ಗೋಲ್ ಕೀಪರ್ ಆಗಿದ್ದ ಮನ್ಸೂರ್ ಅಹ್ಮದ್ ಹಲವು ದಿನಗಳಿಂದ ಹೃದ್ರೋಗದಿಂದ ಬಳಲುತ್ತಿದ್ದರು.

ಅನಾರೋಗ್ಯದ ಹಿನ್ನಲೆಯಲ್ಲಿ ಭಾರತಕ್ಕೆ ಬಂದು ಹಾರ್ಟ್ ಟ್ರಾನ್ಸ್ಪ್ಲಾಂಟ್ ಮಾಡಿಸಿಕೊಳ್ಳುವ ಇಚ್ಚೆ ಹೊಂದಿದ್ದ ಮನ್ಸೂರ್ ಅಹ್ಮದ್, ತಮಗೆ ವೈದ್ಯಕೀಯ ವೀಸಾ ನೀಡುವಂತೆ ಭಾರತ ಸರ್ಕಾರಕ್ಕೆ ಮನವಿ ಮಾಡಿದ್ದರು. ಜೊತೆಗೆ ಭಾರತದ ಫೋರ್ಟಿಸ್ ಆಸ್ಪತ್ರೆ ಮನ್ಸೂರ್ ಅಹ್ಮದ್ ರಿಗೆ ಉಚಿತ ಚಿಕಿತ್ಸೆ ನೀಡುವುದಾಗಿ ತಿಳಿಸಿತ್ತು.

ಆದರೆ ಮನ್ಸೂರ್ ಅಹ್ಮದ್ ಚಿಕಿತ್ಸೆ ಪಡೆಯುತ್ತಿದ್ದ ಕರಾಚಿ ಆಸ್ಪತ್ರೆ ವೈದ್ಯರು, ಈಗಾಗಲೇ ಮನ್ಸೂರ್ ಅಹ್ಮದ್ ರ ಆರೋಗ್ಯ ಪರಿಸ್ಥಿತಿ ಬಿಗಡಾಯಿಸಿರುವ ಕಾರಣ ಈ ಸಂದರ್ಭದಲ್ಲಿ ಪ್ರಯಾಣ ಮಾಡುವುದು ಸೂಕ್ತವಲ್ಲವೆಂದು ಕುಟುಂಬ ಸದಸ್ಯರಿಗೆ ಎಚ್ಚರಿಸಿದ್ದರು. ಈ ಹಿನ್ನಲೆಯಲ್ಲಿ ಅವರ ಭಾರತ ಭೇಟಿ ಮುಂದೂಡಲ್ಪಟ್ಟಿತ್ತು. ಇದೀಗ ಮನ್ಸೂರ್ ಅಹ್ಮದ್ ಸಾವನ್ನಪ್ಪಿದ್ದು, ಪಾಕ್ ಕ್ರೀಡಾಭಿಮಾನಿಗಳು ಮನ್ಸೂರ್ ಅಹ್ಮದ್ ನಿಧನಕ್ಕೆ ಶೋಕ ವ್ಯಕ್ತಪಡಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...