alex Certify
ಕನ್ನಡ ದುನಿಯಾ       Mobile App
       

Kannada Duniya

ರೋಹಿತ್ ಶತಕವನ್ನು ಸಂಭ್ರಮಿಸಿದ ಪಾಕ್ ಯುವತಿ…!

ಒಂದೆಡೆ ಪಾಕಿಸ್ತಾನಿ ಯುವತಿಯೊಬ್ಬಳಿಗೆ ಟಾಂಗ್ ನೀಡಿ, ಭಾರತೀಯ ಯುವತಿ ಸಾಮಾಜಿಕ ಜಾಲತಾಣದಲ್ಲಿ ಪ್ರಶಂಸೆಗೆ ಪಾತ್ರರಾಗಿದ್ದರೆ, ಇನ್ನೊಂದೆಡೆ ರೋಹಿತ್ ಶರ್ಮ ಶತಕ ಭಾರಿಸಿದ ಬಳಿಕ ಪಾಕ್ ಯುವತಿ ಭಾರತದ ಧ್ವಜ ಹಾರಾಡಿಸುವ ಮೂಲಕ, ಸಾಮಾಜಿಕ ಜಾಲತಾಣದ ಕೇಂದ್ರ ಬಿಂದುವಾಗಿದ್ದಾರೆ.

ಭಾನುವಾರದ ಪಂದ್ಯದಲ್ಲಿ ಶಿಖರ್ ಧವನ್ ಮತ್ತು ರೋಹಿತ್ ಶರ್ಮ ಅವರ ಶತಕ ಹಾಗೂ ಭಾರತೀಯ ಬೌಲರ್‌ಗಳ ಅತ್ಯುತ್ತಮ ಪ್ರದರ್ಶನದಿಂದ ಟೀಂ ಇಂಡಿಯಾ ಏಷ್ಯಾ ಕಪ್ ಫೈನಲ್‌ಗೆ ಏರಿದ್ದು, 27ರಂದು ನಡೆಯಲಿರುವ ಫೈನಲ್ ಪಂದ್ಯ ಎದುರಾಳಿ ಯಾರಾಗಲಿದ್ದಾರೆ ಎನ್ನುವ ಲೆಕ್ಕಾಚಾರದಲ್ಲಿದೆ. ಆದರೆ ಪಾಕಿಸ್ತಾನದ ವಿರುದ್ದದ ಪಂದ್ಯದಲ್ಲಿ ಭಾರತದ ನಾಯಕ ರೋಹಿತ್ ಶರ್ಮ ಶತಕ ಭಾರಿಸಿದ ಬಳಿಕ, ಕಪ್ಪು ಬುರ್ಖಾ ಧರಿಸಿದ್ದ ಪಾಕ್ ಯುವತಿಯೊಬ್ಬಳು, ತನ್ನ ಪಕ್ಕದಲ್ಲಿದ್ದ ಭಾರತೀಯ ಧ್ವಜವನ್ನು ಹಿಡಿದು, ಹಾರಾಡಿಸಿದ್ದಾಳೆ.

ಭಾರತದ ದೊಡ್ಡ ಧ್ವಜವನ್ನು ಹಿಡಿದು ಈ ರೀತಿ ಹಾರಾಡಿಸುವುದನ್ನು ಅನೇಕರು ನೋಡಿದರೂ, ಈ ಬಗ್ಗೆ ತಲೆಕೆಡಿಸಿಕೊಂಡಂತೆ ಕಾಣದ ಯುವತಿ, ಸಂಭ್ರಮಿಸುವುದನ್ನು ಮುಂದುವರಿಸಿದಳು. ಈ ರೀತಿ ಎದುರಾಳಿ ದೇಶದ ನಾಯಕನ ಶತಕದ ಸಂಭ್ರಮವನ್ನು ಪಾಕ್ ಯುವತಿ ಸಂಭ್ರಮಿಸುತ್ತಿರುವುದು, ಇದೀಗ ವೈರಲ್ ಆಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...