alex Certify
ಕನ್ನಡ ದುನಿಯಾ       Mobile App
       

Kannada Duniya

ಮಾಜಿ ಕ್ರಿಕೆಟಿಗನ ಬಣ್ಣ ಬಯಲಿಗೆಳೆದ ಮಹಿಳೆ

imran-khm

ಇಸ್ಲಾಮಾಬಾದ್: ಪಾಕಿಸ್ತಾನದ ತೆಹ್ರಿಕ್ ಇ ಇನ್ಸಾಫ್ ಪಕ್ಷದ ಮುಖ್ಯಸ್ಥ, ಮಾಜಿ ಕ್ರಿಕೆಟಿಗ ಇಮ್ರಾನ್ ಖಾನ್ ತಮ್ಮದೇ ಪಕ್ಷದ ಮಹಿಳಾ ಮುಖಂಡರೊಬ್ಬರಿಗೆ ಆಕ್ಷೇಪಾರ್ಹ ಸಂದೇಶಗಳನ್ನು ಕಳುಹಿಸಿದ್ದಾರೆ.

ಆಯೇಷಾ ಗುಲಾಲೈ ಹೀಗೆ ಆರೋಪ ಮಾಡಿದ ಮಹಿಳೆ. ಇಮ್ರಾನ್ ಖಾನ್ ಅವರಿಂದ 2013 ರ ಅಕ್ಟೋಬರ್ ನಲ್ಲಿ ಮೊದಲ ಸಂದೇಶವನ್ನು ಸ್ವೀಕರಿಸಿದ್ದೇನೆ ಎಂದು ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಆಯೇಷಾ, ತನಗೆ ಇಮ್ರಾನ್ ಖಾನ್ ತಮ್ಮ ಬ್ಲಾಕ್ ಬೆರ್ರಿ ಸೆಟ್ ನಿಂದ ಅಸಮರ್ಪಕವಾದ ಮೆಸೇಜ್ ಮಾಡಿದ್ದಾರೆ. ಅದನ್ನು ಪರಿಶೀಲಿಸಿದಲ್ಲಿ ಎಲ್ಲವೂ ಗೊತ್ತಾಗಲಿದೆ ಎಂದು ತಿಳಿಸಿದ್ದಾರೆ.

ಪಕ್ಷ ಸೇರಿದಾಗಿನಿಂದ ಇಮ್ರಾನ್ ಖಾನ್ ಇದೇ ರೀತಿ ಮಾಡುತ್ತಿದ್ದಾರೆ. ನನ್ನಂತೆಯೇ ಇನ್ನೂ ಹಲವು ಮಹಿಳೆಯರಿಗೆ ಅಸಮರ್ಪಕ ಸಂದೇಶ ರವಾನಿಸಿದ್ದಾರೆ ಎಂದು ದೂರಿದ್ದಾರೆ.

ಗೌರವದಿಂದ ಇರುವವರು ಇಂತಹುದನ್ನು ಸಹಿಸಲು ಸಾಧ್ಯವಿಲ್ಲ. ಈ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಬೇಕೆಂದು ಅವರು ಒತ್ತಾಯಿಸಿದ್ದಾರೆ.

ಪಕ್ಷದ ಕಾರ್ಯಕರ್ತರು ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ. ಅದನ್ನು ಬಗೆಹರಿಸದೇ ಮನೆಯಲ್ಲಿಯೇ ಕೂರುವ ಇಮ್ರಾನ್ ಖಾನ್ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅವರಿಗೆ ಪ್ರತಿಭಾನ್ವಿತರನ್ನು ಕಂಡರೆ ಆಗುವುದಿಲ್ಲ ಎಂದು ದೂರಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...