alex Certify
ಕನ್ನಡ ದುನಿಯಾ       Mobile App
       

Kannada Duniya

ಜಾಲತಾಣದಲ್ಲಿ ಹರಿದಾಡ್ತಿದೆ ಈ ಕ್ರಿಕೆಟಿಗನ ಸಾವಿನ ಸುದ್ದಿ

ತಮ್ಮದೇ ಸಾವಿನ ಸುದ್ದಿ ಕೇಳಿ ಪಾಕಿಸ್ತಾನದ ಕ್ರಿಕೆಟಿಗ ಉಮರ್ ಅಕ್ಮಲ್ ಶಾಕ್ ಆಗಿದ್ದಾರೆ. ಸಾಮಾಜಿಕ ತಾಣಗಳಲ್ಲಿ ಉಮರ್ ಅಕ್ಮಲ್ ಸತ್ತಿದ್ದಾರೆ ಅನ್ನೋ ಸುಳ್ಳು ಸುದ್ದಿ ವೈರಲ್ ಆಗಿತ್ತು. ಇದನ್ನು ನೋಡಿದ ಉಮರ್ ಅಕ್ಮಲ್ ತಾವು ಸುರಕ್ಷಿತವಾಗಿರೋದಾಗಿ ಟ್ವಿಟ್ಟರ್ ಮೂಲಕ ಸ್ಪಷ್ಟಪಡಿಸಿದ್ದಾರೆ.

ಇಂತಹ ಸುಳ್ಳು ಸುದ್ದಿಗಳನ್ನು ಹಬ್ಬಿಸದಂತೆ ಮನವಿ ಮಾಡಿಕೊಂಡಿದ್ದಾರೆ. ಈ ವರ್ಷ ಜನವರಿಯಲ್ಲಿ ಅಡಿಲೇಡ್ ನಲ್ಲಿ ಆಸೀಸ್ ವಿರುದ್ಧ ನಡೆದ ಏಕದಿನ ಪಂದ್ಯದ ಬಳಿಕ ಉಮರ್ ಅಕ್ಮಲ್ ಪಾಕಿಸ್ತಾನ ತಂಡದ ಪರ ಕಣಕ್ಕಿಳಿದಿಲ್ಲ.

27ರ ಹರೆಯದ ಲಾಹೋರ್ ಮೂಲದ ಅಕ್ಮಲ್ ಈವರೆಗೆ 116 ಏಕದಿನ ಪಂದ್ಯಗಳನ್ನಾಡಿದ್ದು, 3044 ರನ್ ಬಾರಿಸಿದ್ದಾರೆ. ಪಾಕಿಸ್ತಾನದ ಮುಖ್ಯ ತರಬೇತುದಾರ ಮಿಕ್ಕಿ ಆರ್ಥರ್ ತಮ್ಮನ್ನು ನಿಂದಿಸಿದ್ದಾರೆ ಅಂತಾ ಅಕ್ಮಲ್ ಆರೋಪ ಮಾಡಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...