alex Certify
ಕನ್ನಡ ದುನಿಯಾ       Mobile App
       

Kannada Duniya

ಚಾಂಪಿಯನ್ಸ್ ಟ್ರೋಫಿ ತಂಡಕ್ಕೆ ವಾಪಸ್ ಆದ ಪಾಕ್ ಮಾಜಿ ನಾಯಕ

pak_ruwd3tn

ಜೂನ್ ನಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಗೆ ಪಾಕಿಸ್ತಾನದ ಟೀಂ ಘೋಷಣೆಯಾಗಿದೆ. ತಂಡ ಘೋಷಣೆಗೆ ಕೊನೆಯ ದಿನವಾಗಿದ್ದ ಮಂಗಳವಾರ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ತಂಡವನ್ನು ಆಯ್ಕೆ ಮಾಡಿದೆ. ತಂಡದ ಮಾಜಿ ನಾಯಕ ಅಜರ್ ಅಲಿ ಹಾಗೂ ವಿಕೆಟ್ ಕೀಪರ್ ಉಮರ್ ಅಕ್ಮಲ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಚಾಂಪಿಯನ್ಸ್ ಟ್ರೋಫಿಯಲ್ಲಿ ಸರ್ಫ್ರಾಜ್ ಅಹ್ಮದ್ ಪಾಕಿಸ್ತಾನ ತಂಡವನ್ನು ಮುನ್ನೆಡೆಸಲಿದ್ದಾರೆ. ಅಜರ್ ಅಲಿ ಫೆಬ್ರವರಿಯಲ್ಲಿ ನಾಯಕತ್ವದಿಂದ ಕೆಳಗಿಳಿದಿದ್ದರು. ಆಸ್ಟ್ರೇಲಿಯಾ ವಿರುದ್ಧ 1-4ರ ಹೀನಾಯ ಸೋಲಿನ ನಂತ್ರ ಅಜರ್ ಅಲಿಯನ್ನು ಟೀಂನಿಂದ ಹೊರಗಿಡಲಾಗಿತ್ತು. ಆದ್ರೀಗ ಚಾಂಪಿಯನ್ಸ್ ಟ್ರೋಫಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಉಮರ್ ಕೂಡ ಆಸ್ಟ್ರೇಲಿಯಾ ವಿರುದ್ಧ ನಡೆದ ಪಂದ್ಯದಲ್ಲಿ ಕೇವಲ 131 ರನ್ ಮಾತ್ರ ಗಳಿಸಿದ್ದರು. ಆದ್ರೆ ಹಿಂದಿನ ದಾಖಲೆ ಹಾಗೂ ಫಿಟ್ನೆಸ್ ನೋಡಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಬೋರ್ಡ್ ಹೇಳಿದೆ. ಚಾಂಪಿಯನ್ಸ್ ಟ್ರೋಫಿಯ ಬಿ ತಂಡದಲ್ಲಿ ಪಾಕಿಸ್ತಾನವಿರಲಿದ್ದು, ಜೂನ್ ನಾಲ್ಕರಂದು ಭಾರತದ ಜೊತೆ ಸೆಣೆಸಾಡಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...