alex Certify
ಕನ್ನಡ ದುನಿಯಾ       Mobile App
       

Kannada Duniya

ಪಿವಿ ಸಿಂಧು ನಡೆದು ಬಂದ ದಾರಿ

sindhu_Dw6DIjJ

ಭಾರತದ ಹೆಮ್ಮೆಯ ಕುವರಿ, ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು. ವಿಶ್ವ ಬ್ಯಾಡ್ಮಿಂಟನ್ ರ್ಯಾಂಕಿಂಗ್ ಪಟ್ಟಿಯಲ್ಲಿ 10ನೇ ಸ್ಥಾನದಲ್ಲಿರುವ ಸಿಂಧು, ಫೈನಲ್ ಪಂದ್ಯದಲ್ಲಿ ವಿಶ್ವದ ಅಗ್ರ ಶ್ರೇಯಾಂಕಿತ ಆಟಗಾರ್ತಿ ಸ್ಪೇನ್ ನ ಕ್ಯಾರೊಲಿನಾ ಮರಿನ್ ಅವರನ್ನು ಎದುರಿಸಿ ಭರ್ಜರಿ ಪೈಪೋಟಿ ನೀಡಿದ್ದು, ಅಂತಿಮವಾಗಿ ಬೆಳ್ಳಿ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ.

ಬ್ಯಾಡ್ಮಿಂಟನ್ ಆಟಗಾರ್ತಿ ಊರಲು ಪುಸರ್ಲಾ ವೆಂಕಟ ಸಿಂಧು ಜನಿಸಿದ್ದು ಜುಲೈ5, 1995, ಹೈದ್ರಾಬಾದ್ ನಲ್ಲಿ. 2001 ರಲ್ಲಿ ಆಲ್ ಇಂಗ್ಲೆಂಡ್ ಓಪನ್ ಬ್ಯಾಡ್ಮಿಂಟನ್ ಚಾಂಪಿಯನ್ ಪಿ ಗೋಪಿಚಂದ್ ರಿಂದ ಸ್ಫೂರ್ತಿ ಪಡೆದ ಸಿಂಧು ತಾವೂ ಬ್ಯಾಡ್ಮಿಂಟನ್ ಹಿಡಿಯುವ ನಿರ್ಧಾರ ಕೈಗೊಂಡಿದ್ದರು. ಪಿವಿ ಸಿಂಧು ತಂದೆ ಪಿ.ವಿ. ರಮಣ ಹಾಗೂ ತಾಯಿ ಪಿವಿ ವಿಜಯ, ಮಾಜಿ ವಾಲಿಬಾಲ್ ಆಟಗಾರರಾಗಿದ್ದಾರೆ.

ಎಂಟನೇ ವಯಸ್ಸಿನಲ್ಲಿಯೇ ಬ್ಯಾಡ್ಮಿಂಟನ್ ಶುರುಮಾಡಿದ್ರು ಸಿಂಧು. ಶ್ರೀ ವೆಂಕಟೇಶ್ವರ ಬಾಲ ಕಾಟೇಜ್ ನಲ್ಲಿ ಮೊದಲು ತರಬೇತಿ ಪಡೆಯಲು ಆರಂಭಿಸಿದ್ರು. ಸಿಕಂದರಾಬಾದ್ ನ ಇಂಡಿಯನ್ ರೈಲ್ವೆ ಸಿಗ್ನಲ್ ಎಂಜಿನಿಯರಿಂಗ್ ಹಾಗೂ ದೂರ ಸಂಪರ್ಕದ ಬ್ಯಾಡ್ಮಿಂಟನ್ ಮೈದಾನದಲ್ಲಿ ಮೆಹಬೂಬ್ ಅಲಿ ಮಾರ್ಗದರ್ಶನದಲ್ಲಿ ಮೂಲಭೂತ ತರಬೇತಿ ಪಡೆದರು. ನಂತ್ರ ಪಿ ಗೋಪಿಚಂದನ್ ಬ್ಯಾಡ್ಮಿಂಟನ್ ಅಕಾಡಮಿಯಲ್ಲಿ ಗೋಪಿಚಂದ್ ಅವರಿಂದ ಬ್ಯಾಡ್ಮಿಂಟನ್ ಕಲಿತರು. ಸಾಧನೆಗಳ ಮೇಲೆ ಸಾಧನೆ ಮಾಡುತ್ತ ಬಂದಿರುವ ಸಿಂಧು, ಮಾರ್ಚ್ 30,2015 ರಂದು ಪದ್ಮಶ್ರೀ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.

ಪ್ರಶಸ್ತಿಗಳ ಗರಿ

2009 ರಲ್ಲಿ ಕೊಲಂಬೊದಲ್ಲಿ ನಡೆದ ಸಬ್ ಜೂನಿಯರ್ ಏಷ್ಯನ್ ಬ್ಯಾಡ್ಮಿಂಟನ್ ಚಾಂಪಿಯಶಿಪ್ ನಲ್ಲಿ ಸಿಂಧು ಕಂಚಿನ ಪದಕ ಗೆದ್ದರು.

2010 ರಲ್ಲಿ ಇರಾನ್ ಫಜ್ರ್ ಅಂತರಾಷ್ಟ್ರೀಯ ಬ್ಯಾಡ್ಮಿಂಟನ್ ಚಾಲೆಂಜ್ ಸಿಂಗಲ್ಸ್ ನಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ.

2010 ರಲ್ಲಿ ಥಾಮಸ್ ಮತ್ತು ಉಬೆರ್ ಕಪ್ ನ ಭಾರತೀಯ ರಾಷ್ಟ್ರೀಯ ತಂಡದ ಸದಸ್ಯರಾಗಿದ್ದರು.

2013 ರಲ್ಲಿ ಮಲೇಷ್ಯಾ ಓಪನ್ ಗ್ರ್ಯಾನ್ ಪ್ರಿ ಯಲ್ಲಿ ಅದ್ಭುತ ಪ್ರದರ್ಶನ ತೋರಿದ ಸಿಂಧು, ಚಿನ್ನದ ಪದಕ ಗಳಿಸಿ ದೇಶಕ್ಕೆ ಹೆಸರು ತಂದಿದ್ದರು,

ಮಕಾವು ಓಪನ್ ಬ್ಯಾಡ್ಮಿಂಟನ್ ಚಾಂಪಿಯನ್ ಚಿನ್ನದ ಪದಕ ಗಳಿಸಿದರು.

2013 ರಲ್ಲಿ ಭಾರತೀಯ ರಾಷ್ಟ್ರೀಯ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.

ಪ್ರಸಕ್ತ ವರ್ಷ ಮೆಕ್ಸಿಕೋ ದಲ್ಲಿ ನಡೆದ ಜೂನಿಯರ್ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ನಲ್ಲಿ ಕ್ವಾರ್ಟರ್ ಫೈನಲ್ ತಲುಪಿದ್ದರು.

ರಿಯೊ ಒಲಂಪಿಕ್ಸ್ ಪ್ರಯಾಣ:

ರಿಯೊ ಪಲಂಪಿಕ್ಸ್ ನಲ್ಲಿ ಸಿಂಧು ತಮಗಿಂತ ರ್ಯಾಂಕಿಂಗ್ ನಲ್ಲಿ ಮುಂದಿರುವ ಆಟಗಾರರನ್ನು ಮಣಿಸಿದ್ದಾರೆ. ಸೆಮಿಫೈನಲ್ ನಲ್ಲಿ ಆರನೇ ರ್ಯಾಂಕ್ ನಲ್ಲಿರುವ ಜಪಾನಿನ ನೊಜೊಮಿ ಒಕುಹರ ವಿರುದ್ಧ ಗೆಲುವು ಸಾಧಿಸಿದ್ದಾರೆ.

ಕ್ವಾರ್ಟರ್ ಫೈನಲ್ ನಲ್ಲಿ ಲಂಡನ್ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಪದಕ ಪಡೆದ ಚೀನಾದ ವಾಂಗ್ ಯಿಹಾನ್​ರನ್ನು ಸೋಲಿಸಿ ಸೆಮಿ ಫೈಲ್ ಗೆ ಎಂಟ್ರಿಯಾಗಿದ್ದರು ಸಿಂಧು.

ರಿಯೋ ಡಿ ಜನೈರೋದಲ್ಲಿ ನಡೆದ ಮಹಿಳೆಯ ಸಿಂಗಲ್ಸ್ ವಿಭಾಗದಲ್ಲಿ ಪಿವಿ ಸಿಂಧು ತೈಪೆ ದೇಶದ ಟಾಯ್ ಟ್ಜು ಯಿಂಗ್ ರನ್ನು ಮಣಿಸಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...