alex Certify
ಕನ್ನಡ ದುನಿಯಾ       Mobile App
       

Kannada Duniya

ಭಾರತಕ್ಕೆ ಬಂದಿಳಿದ ಬೆಳ್ಳಿ ತಾರೆಗೆ ಅದ್ಧೂರಿ ಸ್ವಾಗತ

Glasgow: India's Bronze medallist P V Sindhu after the medal ceremony of Women's Single Badminton final match at Commonwealth Games 2014 in Glasgow, Scotland on Sunday. PTI Photo by Manvender Vashist(PTI8_3_2014_000133B)

ಹೈದರಾಬಾದ್: ಬ್ರೆಜಿಲ್ ನ ರಿಯೋ ಡಿ ಜನೈರೋದಲ್ಲಿ ನಡೆದ ಒಲಿಂಪಿಕ್ಸ್ ನ ಬ್ಯಾಡ್ಮಿಂಟನ್ ಮಹಿಳಾ ಸಿಂಗಲ್ಸ್ ನಲ್ಲಿ ಐತಿಹಾಸಿಕ ಸಾಧನೆ ಮಾಡಿದ ಪಿ.ವಿ. ಸಿಂಧು ಭಾರತಕ್ಕೆ ಆಗಮಿಸಿದ್ದಾರೆ.

ಹೈದರಾಬಾದ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಸಿಂಧು ಅವರಿಗೆ, ಅದ್ಧೂರಿ ಸ್ವಾಗತ ನೀಡಲಾಯಿತು. ರಿಯೋ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಪದಕ ಗಳಿಸುವುದರೊಂದಿಗೆ ಐತಿಹಾಸಿಕ ಸಾಧನೆ ಮಾಡಿದ ಸಿಂಧು ಅವರಿಗೆ ತವರಿನಲ್ಲಿ ಅದ್ಧೂರಿ ಸ್ವಾಗತ ನೀಡಲಾಯಿತು. ಮುಂಬೈ ಮೂಲದ ಖಾಸಗಿ ಬಸ್ ಸಂಸ್ಥೆ ಸಿಂಧು ಮೆರವಣಿಗೆಗೆ ಓಪನ್ ಬಸ್ ವ್ಯವಸ್ಥೆ ಮಾಡಿತ್ತು. ಮೆರವಣಿಗೆ ಮೂಲಕ ಅವರನ್ನು ಗಚ್ಚಿಬೌಲಿ ಮೈದಾನಕ್ಕೆ ಕರೆತರಲಾಗುವುದು.

ತೆಲಂಗಾಣ ಸರ್ಕಾರದ ವತಿಯಿಂದ ಅವರಿಗೆ ಗಚ್ಚಿಬೌಲಿ ಸ್ಟೇಡಿಯಂನಲ್ಲಿ ಅದ್ಧೂರಿ ಸನ್ಮಾನ ಮಾಡಲಾಗುವುದು. ಸಿಂಧು ಅವರಿಗೆ 5 ಕೋಟಿ ರೂ. ಚೆಕ್, 5 ಎಕರೆ ಜಮೀನು ಹಾಗೂ ಸರ್ಕಾರಿ ಉದ್ಯೋಗ ನೀಡಲಾಗುವುದು. ಜೊತೆಗೆ ಕೋಚ್ ಗೋಪಿಚಂದ್ ಅವರಿಗೆ ಸನ್ಮಾನ ಮಾಡಲಾಗುವುದು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...