alex Certify
ಕನ್ನಡ ದುನಿಯಾ       Mobile App
       

Kannada Duniya

ಐಪಿಎಲ್ ಹರಾಜಿಗೆ ಸಾವಿರ ಆಟಗಾರರ ನೋಂದಣಿ…!

ಇಂಡಿಯನ್ ಪ್ರೀಮಿಯರ್ ಲೀಗ್ ಐಪಿಎಲ್ ನಲ್ಲಿ ಆಡಬೇಕೆಂದರೆ ಯಾವ ದೇಶದ ಆಟಗಾರನಾದರೂ ಖುಷಿಯೋ ಖುಷಿ. ಕಾರಣ ಭಾರತದಲ್ಲಿ ಕ್ರಿಕೆಟ್ ಅನ್ನು ಪ್ರೀತಿಸುವ ಪ್ರೇಕ್ಷಕರಷ್ಟು ಇನ್ನೆಲ್ಲೂ ಪ್ರೀತಿಸಲಾರರು ಎಂಬುದು. ಇದಕ್ಕೆ ತಾಜಾ ಉದಾಹರಣೆ ಎಂಬಂತೆ 2019 ರಲ್ಲಿ ನಡೆಯಲಿರುವ ಐಪಿಎಲ್ ಗೆ ಈಗಾಗಲೇ ಸಾವಿರಕ್ಕೂ ಹೆಚ್ಚು ಆಟಗಾರರು ನೋಂದಣಿ ಮಾಡಿಸಿಕೊಂಡಿದ್ದಾರೆ ಎಂದು ಬಿಸಿಸಿಐ ಹೇಳಿದೆ.

ನೋಂದಣಿ ಅವಧಿ ಬುಧವಾರಕ್ಕೆ ಮುಕ್ತಾಯಗೊಂಡಿದ್ದು, ಈಗಾಗಲೇ ತಂಡದಲ್ಲಿರುವ 232 ಆಟಗಾರರ ಸಹಿತ ಒಟ್ಟು 1003 ಆಟಗಾರರು ನೋಂದಣಿ ಮಾಡಿಸಿಕೊಂಡಿದ್ದಾರೆ. ಒಟ್ಟು 145.25 ಕೋಟಿ ರೂಪಾಯಿಯಲ್ಲಿ ಹರಾಜು ಪ್ರಕ್ರಿಯೆ ನಡೆಯಲಿದ್ದು ಎಂಟು ಫ್ರಾಂಚೈಸಿಗಳು ಪಾಲ್ಗೊಳ್ಳಲಿವೆ. ಎಪ್ಪತ್ತು ಸ್ತರಗಳಲ್ಲಿ ಆಟಗಾರರನ್ನು ಹರಾಜು ಪ್ರಕ್ರಿಯೆಯಲ್ಲಿ ಕೊಂಡುಕೊಳ್ಳಲಾಗುವುದು. ಜೈಪುರದಲ್ಲಿ ಡಿ.18 ರಂದು ಹರಾಜು ಪ್ರಕ್ರಿಯೆ ನಡೆಯಲಿದೆ.

ಐಪಿಎಲ್ ಸರಣಿಯಲ್ಲಿ ಇದೇ ಮೊದಲ ಬಾರಿಗೆ ಒಂಭತ್ತು ರಾಜ್ಯಗಳಾದ ಅರುಣಾಚಲ ಪ್ರದೇಶ, ಬಿಹಾರ, ಮಣಿಪುರ, ಮೇಘಾಲಯ, ಮಿಜೋರಾಮ್ ನಾಗಾಲ್ಯಾಂಡ್, ಸಿಕ್ಕಿಂ, ಉತ್ತರಾಖಂಡ್, ಪುದುಚೇರಿ ರಾಜ್ಯಗಳ ಆಟಗಾರರು ನೋಂದಣಿ ಮಾಡಿಸಿಕೊಂಡಿದ್ದಾರೆ. ಡಿಸೆಂಬರ್ 10 ರಂದು ಅಂತಿಮ ಆಟಗಾರರ ಪಟ್ಟಿಯನ್ನು ಬಿಡುಗಡೆ ಮಾಡಲಾಗುತ್ತದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...