alex Certify
ಕನ್ನಡ ದುನಿಯಾ       Mobile App
       

Kannada Duniya

“ಅನುಭವ, ಜ್ಞಾನದಲ್ಲಿ ಭಾರತ 20 ವರ್ಷ ಹಿಂದಿದೆ”

kevin-durant

ಅಮೆರಿಕಾದ ಬಾಸ್ಕೆಟ್ಬಾಲ್ ಆಟಗಾರ ಕೆವಿನ್ ಡ್ಯುರಾಂಟ್ ಬಾಸ್ಕೆಟ್ಬಾಲ್ ಪ್ರಚಾರಕ್ಕಾಗಿ ಭಾರತಕ್ಕೆ ಬಂದಿದ್ದರು. ಭಾರತ ಪ್ರವಾಸದ ಬಗ್ಗೆ ಮಾತನಾಡಿದ ಕೆವಿನ್ ಭಾರತ ಜ್ಞಾನ ಹಾಗೂ ಅನುಭವದಲ್ಲಿ 20 ವರ್ಷಗಳಷ್ಟು ಹಿಂದಿದೆ ಎಂದಿದ್ದಾರೆ.

ನ್ಯಾಷನಲ್ ಬಾಸ್ಕೆಟ್ಬಾಲ್ ಅಸೋಸಿಯೇಷನ್ ಸ್ಟಾರ್ ಆಟಗಾರ ಕೆವಿನ್ ಭಾರತದ ಪ್ರವಾಸ ವಿಚಿತ್ರವಾಗಿತ್ತು ಎಂದಿದ್ದಾರೆ. ಇಲ್ಲಿನ ರಸ್ತೆಗಳಲ್ಲಿ ದನಗಳು ಓಡಾಡುತ್ತವೆ, ಕೋತಿಗಳು ಕಾಣಿಸುತ್ತವೆ. ಲಕ್ಷಾಂತರ ಮಂದಿ ರಸ್ತೆ ಬದಿಯಲ್ಲಿ ಓಡಾಡ್ತಾರೆ. ಲಕ್ಷಾಂತರ ವಾಹನಗಳು ಓಡಾಡುತ್ತವೆ. ಆದ್ರೂ ಸಂಚಾರಿ ನಿಯಮಗಳನ್ನು ಉಲ್ಲಂಘಿಸುವುದಿಲ್ಲ ಎಂದು ಕೆವಿನ್ ಹೇಳಿದ್ದಾರೆ.

ಭಾರತದಲ್ಲಿ ಅನೇಕ ಜನರಿಗೆ ಸರಿಯಾಗಿ ಸೌಲಭ್ಯಗಳು ಸಿಗ್ತಿಲ್ಲ. ಆದ್ರೂ ಬಾಸ್ಕೆಟ್ಬಾಲ್ ನಲ್ಲಿ ಆಸಕ್ತಿ ಹೊಂದಿದ್ದಾರೆ. ಇದು ಆಶ್ಚರ್ಯ ಹುಟ್ಟಿಸುವ ಸಂಗತಿ ಎಂದಿದ್ದಾರೆ ಕೆವಿನ್. ತಾಜ್ ಮಹಲ್ ಗೆ ಹೋಗುವ ಮುನ್ನ ಅದ್ರ ಬಗ್ಗೆ ನನ್ನ ಕಲ್ಪನೆ ಬೇರೆಯಿತ್ತು. ಆದ್ರೆ ಅಲ್ಲಿ ಹೋದ ಮೇಲೆ ಆಶ್ಚರ್ಯ ಕಾದಿತ್ತು. ರಸ್ತೆ ಬದಿಯಲ್ಲಿ ಮಣ್ಣು, ಸಣ್ಣ ಸಣ್ಣ ಮನೆಗಳು, ಬಾಗಿಲು, ಕಿಟಕಿಗಳಿಲ್ಲದೆ ಮನೆಗಳು, ರಸ್ತೆ ಮಧ್ಯೆ ಓಡಾಡುವ ದನ, ಕೋತಿಗಳು ಕಾಣಿಸಿದ್ವು. ಕೆಲವೇ ಕ್ಷಣಗಳಲ್ಲಿ ತಾಜ್ ಮಹಲ್ ಕಾಣಿಸ್ತು ಎಂದಿದ್ದಾರೆ ಕೆವಿನ್.

 

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...