alex Certify
ಕನ್ನಡ ದುನಿಯಾ       Mobile App
       

Kannada Duniya

ದುಪ್ಪಟ್ಟಾಯ್ತು ಗೆಳತಿ ಕೊಂದ ಆಸ್ಕರ್ ಪಿಸ್ಟೋರಿಯಸ್ ಶಿಕ್ಷೆ

ಪ್ರೇಯಸಿಯನ್ನು ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪ್ಯಾರಾಲಂಪಿಯನ್ ಆಸ್ಕರ್ ಪಿಸ್ಟೋರಿಯಸ್ ಗೆ ವಿಧಿಸಿದ್ದ ಶಿಕ್ಷೆಯನ್ನು ದಕ್ಷಿಣ ಆಫ್ರಿಕಾದ ನ್ಯಾಯಾಲಯ ಹೆಚ್ಚಳ ಮಾಡಿದೆ. ಪಿಸ್ಟೋರಿಯಸ್ ಗೆ ಈ ಮೊದಲು 6 ವರ್ಷ ಜೈಲು ಶಿಕ್ಷೆ ವಿಧಿಸಲಾಗಿತ್ತು. ಅದನ್ನು ಈಗ 13 ವರ್ಷ 6 ತಿಂಗಳುಗಳಿಗೆ ಏರಿಕೆ ಮಾಡಲಾಗಿದೆ.

ಗೆಳತಿ ರೀವಾಳನ್ನು ಹತ್ಯೆ ಮಾಡಿದ ಬಳಿಕ ತನಗೆ ನಿಜವಾಗಿಯೂ ಪಶ್ಚಾತ್ತಾಪವಾಗಿದೆ ಅನ್ನೋದನ್ನು ಸಾಬೀತುಪಡಿಸಲು ಪಿಸ್ಟೋರಿಯಸ್ ಅವರಿಂದ ಸಾಧ್ಯವಾಗಿಲ್ಲ ಅಂತಾ ಎದುರಾಳಿ ವಕೀಲರು ವಾದ ಮಂಡಿಸಿದ್ದರು. ಪಿಸ್ಟೋರಿಯಸ್ ಅತ್ಯಂತ ಗಂಭೀರ ಅಪರಾಧ ಎಸಗಿರುವುದರಿಂದ ಶಿಕ್ಷೆ ಕೂಡ ಹೆಚ್ಚಾಗಬೇಕೆಂದು ಮನವಿ ಮಾಡಿದ್ದರು.

2013ರಲ್ಲಿ ವ್ಯಾಲಂಟೈನ್ ಡೇಯಂದು ಬೆಳಗಿನ ಜಾವ ಪಿಸ್ಟೋರಿಯಸ್ ಗೆ ಸರ್ಪ್ರೈಸ್ ಕೊಡಲು ರೀವಾ ಮನೆಗೆ ಬಂದಿದ್ಲು. ಆದ್ರೆ ದರೋಡೆಕೋರ ಎಂದುಕೊಂಡು ಪಿಸ್ಟೋರಿಯಸ್ ಗುಂಡು ಹಾರಿಸಿ ಅವಳನ್ನು ಹತ್ಯೆ ಮಾಡಿದ್ದ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...