alex Certify
ಕನ್ನಡ ದುನಿಯಾ       Mobile App
       

Kannada Duniya

ಜಾಲತಾಣದಲ್ಲಿ ಹರಿದಾಡುತ್ತಿದೆ ಆಟಗಾರರ ಈ ಫೋಟೋ

hockey-fb-m

ನವದೆಹಲಿ: ಒಲಂಪಿಕ್ ಕ್ರೀಡಾಕೂಟಕ್ಕೆಂದು ರಿಯೋ ತಲುಪಿರುವ ಭಾರತ ಹಾಕಿ ಟೀಮ್, ಎಲ್ಲ ಸೌಲಭ್ಯದಿಂದ ವಂಚಿತವಾಗಿದೆ. ಹಾಕಿ ಆಟಗಾರರಿಗೆಂದು ನೀಡಿದ ರೂಮ್ ಗಳಲ್ಲಿ ಟಿವಿ, ಫರ್ನಿಚರ್ ಯಾವುದೂ ಇಲ್ಲ. ಅಲ್ಲಿರುವುದು 4 ಬೀನ್ ಬ್ಯಾಗ್ ಮತ್ತು 2 ಕುರ್ಚಿಗಳು ಮಾತ್ರ!

ಭಾರತದ ಹಾಕಿ ಆಟಗಾರರು ಬೀನ್ ಬ್ಯಾಗ್ ಮೇಲೆ ಕುಳಿತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಬೀನ್ ಬ್ಯಾಗ್ ಮೇಲೆ ಕುಳಿತ ಆಟಗಾರರ ಕೋಣೆಯಲ್ಲಿ ಯಾವುದೇ ಫರ್ನಿಚರ್ ಗಳು ಕಾಣಿಸುತ್ತಿಲ್ಲ.

ಭಾರತ ಹಾಕಿ ತಂಡದ ತರಬೇತುದಾರರು ಕೂಡಾ, ರಿಯೋದಲ್ಲಿ ಹಾಕಿ ಆಟಗಾರರಿಗೆ ಕೊಟ್ಟಿರುವ ಅಪಾರ್ಟ್ ಮೆಂಟ್ ನಲ್ಲಿ ಸರಿಯಾದ ವ್ಯವಸ್ಥೆ ಇಲ್ಲ. ಫರ್ನಿಚರ್ ಗಳ ಕೊರತೆಯಿದೆ. ಟಿವಿ ಕೂಡ ಇಲ್ಲ ಎಂದಿದ್ದಾರೆ. ಇಷ್ಟೆಲ್ಲ ದೂರುಗಳು ಕೇಳಿ ಬಂದರೂ ಸಹ ರಿಯೋ ಒಲಂಪಿಕ್ಸ್ ಆಯೋಜಕರು ಮಾತ್ರ ಯಾವುದೇ ಸೌಲಭ್ಯ ಒದಗಿಸದೇ ಜಾಣ ಕಿವುಡುತನ ತೋರಿಸುತ್ತಿದ್ದಾರೆನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...