alex Certify
ಕನ್ನಡ ದುನಿಯಾ       Mobile App
       

Kannada Duniya

15 ವರ್ಷಗಳ ಬಳಿಕ ರೈಲು ಏರಿದ ಗಂಗೂಲಿಗೆ ಕಹಿ ಅನುಭವ

ganguly

ಕಳೆದ ಕೆಲದಿನಗಳಿಂದ ಟೀಂ ಇಂಡಿಯಾ ಕೋಚ್ ಆಯ್ಕೆ ವಿವಾದದಿಂದಾಗಿಯೇ ಮಾಜಿ ನಾಯಕ ಸೌರವ್ ಗಂಗೂಲಿ ಸುದ್ದಿಯಲ್ಲಿದ್ರು. ಇದೀಗ ರೈಲಿನಲ್ಲಿ ಸಹ ಪ್ರಯಾಣಿಕನೊಬ್ಬನ ಜೊತೆಗೆ ಗಂಗೂಲಿ ಜಗಳ ಮಾಡಿಕೊಂಡಿದ್ದಾರೆ.

ಗಂಗೂಲಿ ಬಲೂರ್ಘಾಟ್ ನಲ್ಲಿ ಪ್ರತಿಮೆಯೊಂದರ ಉದ್ಘಾಟನೆಗೆ ಹೊರಟಿದ್ರು. 15 ವರ್ಷಗಳ ಬಳಿಕ ದಾದಾ ಇದೇ ಮೊದಲ ಬಾರಿಗೆ ರೈಲು ಏರಿದ್ರು. 2001ರ ನಂತರ ಇದೇ ಮೊದಲ ಬಾರಿಗೆ ರೈಲಲ್ಲಿ ಪ್ರಯಾಣ ಮಾಡ್ತಿರೋದಾಗಿ ಟ್ವೀಟ್ ಕೂಡ ಮಾಡಿದ್ರು.

g

ಆದ್ರೆ ಮಾಲ್ಡಾದಿಂದ ಹೊರಟಿದ್ದ ಗಂಗೂಲಿಗೆ Padatik Express ರೈಲಿನ ಪ್ರಯಾಣದ ಅನುಭವ ಮಾತ್ರ ಅಷ್ಟೊಂದು ಹಿತಕರವಾಗಿರಲಿಲ್ಲ. ಸಹ ಪ್ರಯಾಣಿಕನ ಜೊತೆಗೆ ಯಾವುದೋ ಕ್ಷುಲ್ಲಕ ಕಾರಣಕ್ಕೆ ಜಗಳವಾಗಿದೆ. ಕೊನೆಗೆ ಗಂಗೂಲಿ ತಮ್ಮ ಸೀಟನ್ನು ಬಿಟ್ಟು ಬೇರೆ ಬರ್ತ್ ಗೆ ತೆರಳಬೇಕಾಯ್ತು.

2003ರಲ್ಲಿ ಬ್ರಿಸ್ಬೇನ್ ನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ನಲ್ಲಿ ದಾದಾ ಶತಕ ಬಾರಿಸಿದ್ರು. ಅದರ ಸವಿ ನೆನಪಿಗಾಗಿ ಬಲೂರ್ಘಾಟ್ ನಲ್ಲಿ ಗಂಗೂಲಿಯ ಪ್ರತಿಮೆಯನ್ನು ನಿರ್ಮಾಣ ಮಾಡಲಾಗಿದೆ. ಅದನ್ನು ಗಂಗೂಲಿ ಅನಾವರಣಗೊಳಿಸಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...