alex Certify
ಕನ್ನಡ ದುನಿಯಾ       Mobile App
       

Kannada Duniya

ಧರ್ಮಶಾಲಾ ಕ್ರಿಕೆಟ್ ಅಭಿಮಾನಿಗಳಿಗೆ ಮತ್ತೆ ನಿರಾಸೆ

ಕಳೆದ ಕೆಲ ವರ್ಷಗಳಿಂದ ಐಪಿಎಲ್ ನಿಂದ ವಂಚಿತವಾಗಿರುವ ಧರ್ಮಶಾಲಾ ಕ್ರಿಕೆಟ್ ಮೈದಾನದಲ್ಲಿ ಈ ಬಾರಿಯೂ ಐಪಿಎಲ್ ಪಂದ್ಯಗಳು ನಡೆಯುವುದಿಲ್ಲ. ಮೈದಾನದಲ್ಲಿ ನಡೆದ ವಿವಾದದ ನಂತ್ರ ಹಿಮಾಚಲ ಕ್ರಿಕೆಟ್ ಅಸೋಸಿಯೇಷನ್ ಯಾವುದೇ ಐಪಿಎಲ್ ಪಂದ್ಯವನ್ನು ಇಲ್ಲಿ ಆಡಿಸಿಲ್ಲ.

2013ರಲ್ಲಿ ಕೊನೆ ಬಾರಿ ಧರ್ಮಶಾಲಾ ಮೈದಾನದಲ್ಲಿ ಐಪಿಎಲ್ ಪಂದ್ಯ ನಡೆದಿತ್ತು. ನಾಲ್ಕು ವರ್ಷಗಳಿಂದ ಐಪಿಎಲ್ ಪಂದ್ಯ ಈ ಮೈದಾನದಲ್ಲಿ ನಡೆದಿಲ್ಲ. ಅಂತರಾಷ್ಟ್ರೀಯ ಮೈದಾನ ಧರ್ಮಶಾಲೆಯಲ್ಲಿ ಯಾವುದೇ ಪಂದ್ಯ ನಡೆಯದೇ ಇರುವುದು ಸ್ಥಳೀಯ ಕ್ರಿಕೆಟ್ ಅಭಿಮಾನಿಗಳು ಹಾಗೂ ಹೊಟೇಲ್, ಪ್ರವಾಸೋದ್ಯಮ ವ್ಯವಹಾರಸ್ಥರ ನಿರಾಸೆಗೆ ಕಾರಣವಾಗಿದೆ.

ಹಿಮಾಚಲದ ಹುಡುಗಿ ಹಾಗೂ ಬಾಲಿವುಡ್ ನಟಿ ಪ್ರೀತಿ ಝಿಂಟಾ ಒಡೆತನದ ಪಂಜಾಬ್ ಕಿಂಗ್ಸ್ ಇಲೆವನ್ ಮೂರು ವರ್ಷಗಳ ಕಾಲ ಧರ್ಮಶಾಲೆಯನ್ನು ತನ್ನ ಹೋಂ ಗ್ರೌಂಡ್ ಮಾಡಿಕೊಂಡಿತ್ತು. 2010ರಿಂದ 2013ರವರೆಗೆ ಪ್ರತಿ ವರ್ಷ ಐಪಿಎಲ್ ಪಂದ್ಯಗಳು ಧರ್ಮಶಾಲೆಯಲ್ಲಿ ನಡೆದಿದ್ದವು.

ಭದ್ರತಾ ಶುಲ್ಕ, ಮನರಂಜನಾ ತೆರಿಗೆ ಮತ್ತು ಇತರ ಆಡಳಿತಾತ್ಮಕ ಸಮಸ್ಯೆಗಳೊಂದಿಗೆ ಹೋರಾಡಿದ ನಂತ್ರ ಪಂಜಾಬ್ ಕಿಂಗ್ಸ್ ಇಲೆವನ್ ಪುಣೆಯನ್ನು ತನ್ನ ಹೋಂ ಗ್ರೌಂಡ್ ಮಾಡಿಕೊಂಡಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...