alex Certify
ಕನ್ನಡ ದುನಿಯಾ       Mobile App
       

Kannada Duniya

ಕ್ರಿಕೆಟಿಗರ ವಿದೇಶ ಪ್ರವಾಸದಲ್ಲಿ ಗೆಳತಿಯರಿಗೆ ಅವಕಾಶ

ವಿದೇಶ ಪ್ರವಾಸ ವೇಳೆ ಗೆಳತಿ ಅಥವಾ ಪತ್ನಿ ಇರಲು ಅವಕಾಶ ಕಲ್ಪಿಸಿಕೊಡಬೇಕೆಂಬ ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಮನವಿಯನ್ನು ಬಿಸಿಸಿಐ ಕೊನೆಗೂ ಪುರಸ್ಕರಿಸಿದೆ.

ಆದರೆ, ಸರಣಿ ಪ್ರಾರಂಭವಾಗಿ 10 ದಿನಗಳ ಬಳಿಕ ಅವರಿಗೆ ಪ್ರವೇಶಾವಕಾಶ ಕಲ್ಪಿಸಲಾಗಿದೆ. ಈ ಮೊದಲು 2 ವಾರವಷ್ಟೇ ಗೆಳತಿ ಅಥವಾ ಪತ್ನಿ ಉಳಿದುಕೊಳ್ಳಲು ಅವಕಾಶವಿತ್ತು.

ಆದರೆ, ವ್ಯಾಗ್ಸ್ ನೀತಿಯಲ್ಲಿ ಬದಲಾವಣೆ ತರಬೇಕೆಂದು ಬಿಸಿಸಿಐಗೆ ಕೊಹ್ಲಿ ಮನವಿ ಮಾಡಿದ್ದರು. ಈ ಮನವಿಯನ್ನು ಪರಿಶೀಲಿಸಿದ ಕ್ರಿಕೆಟ್ ಆಡಳಿತಾಧಿಕಾರಿ ಸಮಿತಿಯು ಬದಲಾವಣೆ ತರಲು ಒಪ್ಪಿಗೆ ನೀಡಿದೆ. 2015ರಲ್ಲಿ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಸಿಇಒ ಜೇಮ್ಸ್ ಸುದರ್ ಲೆಂಡ್ ಅವರು, ಕ್ರಿಕೆಟಿಗರ ಜತೆ ಗೆಳತಿಯರಿಗೆ ಇರಲು ಅವಕಾಶ ಮಾಡಿಕೊಟ್ಟಿದ್ದರು.

ಪತ್ನಿ ಇಲ್ಲವೇ ಗೆಳತಿಯನ್ನು ಕರೆದೊಯ್ಯುವ ನಿರ್ಧಾರ ಆಯಾ ಕ್ರಿಕೆಟಿಗರಿಗೆ ಬಿಡಬೇಕು. ಆಟಗಾರರು ಯಾರೊಂದಿಗಿದ್ದಾರೆಂಬುದು ಮುಖ್ಯವಲ್ಲ. ಅವರು ಹೇಗೆ ಆಡುತ್ತಾರೆಂಬುದಷ್ಟೇ ಮುಖ್ಯ ಎಂದು ಈ ಹಿಂದೆ ಕ್ರಿಕೆಟಿಗ ಗೌತಮ್ ಗಂಭೀರ್ ಪ್ರತಿಪಾದಿಸಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...