alex Certify
ಕನ್ನಡ ದುನಿಯಾ       Mobile App
       

Kannada Duniya

ಧೋನಿ ಪುತ್ರಿಯ ‘ಮಕ್ಕಳ ದಿನಾಚರಣೆ’ ಸಂಭ್ರಮ‌ದ‌ ವಿಡಿಯೊ ವೈರಲ್

ದೇಶಾದ್ಯಂತ ಬುಧವಾರ ಆಚರಿಸಿದ ಮಕ್ಕಳ ದಿನಾಚರಣೆ ಅಂಗವಾಗಿ ಹಲವು ಸೆಲೆಬ್ರಿಟಿಗಳು ತಮ್ಮ ಮಕ್ಕಳ ಫೋಟೋ ಶೇರ್ ಮಾಡುವ ಮೂಲಕ ಸಂಭ್ರಮಿಸಿದ್ದಾರೆ. ಆದರೀಗ‌ ಧೋನಿ ಮಗಳು ಝೀವಾ ವಿಡಿಯೊ‌ ವೈರಲ್ ಆಗಿದೆ.

ಭಾರತದ ತಂಡದ ಮಾಜಿ ನಾಯಕ ಸೂಪರ್ ಕೂಲ್ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಪುತ್ರಿ ಝೀವಾ ಹಾಗೂ ಹರ್ ಭಜನ್ ಸಿಂಗ್ ಪುತ್ರಿ ಹಿನಯಾ ಜತೆ ಬಣ್ಣ ಬಣ್ಣದ ಚೆಂಡುಗಳೊಂದಿಗೆ ಆಟವಾಡುತ್ತಿರುವ ವಿಡಿಯೊವನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಟ್ವೀಟರ್ ಖಾತೆಯಲ್ಲಿ ಶೇರ್ ಮಾಡಿದ್ದು, ಈ ವಿಡಿಯೊ ಇದೀಗ ವೈರಲ್ ಆಗಿದೆ.

ವಿಡಿಯೋದಲ್ಲಿ ಝೀವಾ ಆಟವಾಡುವಾಗ ಪಕ್ಕದಲ್ಲಿರುವವರು ಊಟ ಮಾಡಿಸಲು ಮುಂದಾದರೂ, ತಿನ್ನದೇ ಮತ್ತೆ ಚೆಂಡುಗಳಿರುವ ಪೂಲ್ ನಲ್ಲಿ ಬೀಳುವುದು ನೆಟ್ಟಿಗರನ್ನು ಸೆಳೆದಿದೆ.

ಸಿಎಸ್ ಕೆ ಈ ವಿಡಿಯೊ ಹಾಕಿದ ಕೆಲವೇ ಕ್ಷಣದಲ್ಲಿ ವೈರಲ್ ಆಗಿದ್ದು, ಸುಮಾರು 18 ಸಾವಿರ ಮಂದಿ ವಿಡಿಯೋ ವೀಕ್ಷಿಸಿದ್ದು ಸಾವಿರಾರು ‌ಲೈಕ್, ಕಾಮೆಂಟ್ ಗಳು ಬಂದಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...