alex Certify
ಕನ್ನಡ ದುನಿಯಾ       Mobile App
       

Kannada Duniya

ಇಲ್ಲಿದೆ ‘ಕಾಂಡೋಮ್’ ಕುರಿತಾದ ಇಂಟ್ರೆಸ್ಟಿಂಗ್ ಸುದ್ದಿ

ಸಿಯೋಲ್: ಪೈಯೋಂಗ್ ಚಾಂಗ್ ನಲ್ಲಿ ‘ಚಳಿಗಾಲದ ಒಲಿಂಪಿಕ್ಸ್ 2018’ ಆರಂಭಕ್ಕೆ ಸಿದ್ಧತೆಗಳು ಪೂರ್ಣಗೊಂಡಿವೆ. ಭಾರೀ ಸಂಖ್ಯೆಯ ಕ್ರೀಡಾಪಟುಗಳು, ತರಬೇತುದಾರರು, ತೀರ್ಪುಗಾರರು, ಕ್ರೀಡಾಪ್ರೇಮಿಗಳು ಒಲಿಂಪಿಕ್ ಗ್ರಾಮಕ್ಕೆ ಆಗಮಿಸಲಿದ್ದಾರೆ.

ಕ್ರೀಡಾಕೂಟದ ಸಂದರ್ಭದಲ್ಲಿ ಹೆಚ್.ಐ.ವಿ. ಸೋಂಕು ತಡೆಯುವ ಉದ್ದೇಶದಿಂದ ಸುಮಾರು 1.10 ಲಕ್ಷ ಕಾಂಡೋಮ್ ಗಳನ್ನು ವಿತರಿಸಲಾಗ್ತಿದೆ. ಗ್ಯಾಂಗ್ ನ್ಯುಯಂಗ್ ಕ್ರೀಡಾ ಗ್ರಾಮದ ಶೌಚಾಲಯಗಳಲ್ಲಿ ಕಾಂಡೋಮ್ ಗಳನ್ನು ಸಂಗ್ರಹಿಸಿ ಇಡಲಾಗಿದೆ. ಕಳೆದ ಬಾರಿಗಿಂತ ಈ ಬಾರಿ ಹೆಚ್ಚುವರಿಯಾಗಿ ಸುಮಾರು 10,000 ಕಾಂಡೋಮ್ ಗಳನ್ನು ವಿತರಿಸಲಾಗುವುದು. ಈಗಾಗಲೇ 1.10 ಲಕ್ಷ ಕಾಂಡೋಮ್ ಸಂಗ್ರಹಿಸಲಾಗಿದೆ.

ಕ್ರೀಡಾ ಗ್ರಾಮದಲ್ಲಿ ಸಕಲ ವ್ಯವಸ್ಥೆಗಳನ್ನು ಮಾಡಲಾಗಿದೆ. ಅಂಗಡಿಗಳು, ಅಂಚೆ ಸೇವೆ ಸೇರಿ ಹಲವು ಸೌಕರ್ಯಗಳಿವೆ. ದಕ್ಷಿಣ ಕೊರಿಯಾದ ಕಾಂಡೋಮ್ ತಯಾರಿಕಾ ಕಂಪನಿ ಕಾಂಡೋಮ್ ಗಳನ್ನು ಸರಬರಾಜು ಮಾಡಿದೆ. 90 ರಾಷ್ಟ್ರಗಳ ಸುಮಾರು 2,925 ಕ್ರೀಡಾಪಟುಗಳು ಪಾಲ್ಗೊಳ್ಳಲಿದ್ದಾರೆ. 2 ವಾರಗಳ ಕಾಲ ಕ್ರೀಡಾಕೂಟ ನಡೆಯಲಿದೆ. ಎಲ್ಲೆಡೆ ಗರ್ಭನಿರೋಧಕಗಳು ಲಭ್ಯವಿರುವಂತೆ ನೋಡಿಕೊಳ್ಳಲಾಗ್ತಿದೆ.

ದಕ್ಷಿಣ ಕೊರಿಯಾದ ಸಿಯೋಲ್ ನಲ್ಲಿ ನಡೆದ 1988 ಒಲಿಂಪಿಕ್ಸ್ ನಲ್ಲಿ ಮೊದಲ ಬಾರಿಗೆ ಹೆಚ್.ಐ.ವಿ. ತಡೆಗೆ ಕಾಂಡೋಮ್ ಗಳನ್ನು ಸಾರ್ವಜನಿಕವಾಗಿ ವಿತರಿಸಲಾಯಿತು. 1994 ರಲ್ಲಿ ವಿಂಟರ್ ಒಲಿಂಪಿಕ್ಸ್ ಸಂಘಟಕರು ಜಾಗೃತಿ ಅಭಿಯಾನದ ಭಾಗವಾಗಿ ಕಾಂಡೋಮ್ ವಿತರಿಸಿದರು. 2000 ರಲ್ಲಿ ಬೇಸಿಗೆ ಒಲಿಂಪಿಕ್ಸ್ ನಲ್ಲಿ ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ನಡೆದ ಬೇಸಿಗೆ ಒಲಿಂಪಿಕ್ಸ್ ನಲ್ಲಿ 90,000 ಕಾಂಡೋಮ್ ವಿತರಿಸಲಾಗಿತ್ತು. 2010 ರಲ್ಲಿ ವಿಂಟರ್ ಒಲಿಂಪಿಕ್ಸ್ ನಲ್ಲಿ 1,00,000 ಕಾಂಡೋಮ್ ವಿತರಿಸಲಾಗಿದೆ. 2016 ರಲ್ಲಿ ರಿಯೊ ಡಿ ಜನೈರೋದಲ್ಲಿ ಬೇಸಿಗೆ ಒಲಿಂಪಿಕ್ಸ್ ನಲ್ಲಿ 4,50,000 ಕಾಂಡೋಮ್ ವಿತರಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...