alex Certify
ಕನ್ನಡ ದುನಿಯಾ       Mobile App
       

Kannada Duniya

ಅಬ್ಬಬ್ಬಾ! ಫಿಫಾ ವಿಶ್ವಕಪ್ ಗೆ ಖರ್ಚಾಗ್ತಿರೋದೆಷ್ಟು ಗೊತ್ತಾ?

ರಷ್ಯಾದಲ್ಲಿ ನಡೆಯಲಿರುವ ಫಿಫಾ ವಿಶ್ವಕಪ್ ಗೆ ಕ್ಷಣಗಣನೆ ಆರಂಭವಾಗಿದೆ. ಜೂನ್ 14ರಿಂದ ವಿಶ್ವಕಪ್ ಪಂದ್ಯಾವಳಿಗಳು ಶುರುವಾಗಲಿವೆ. ವಿಶ್ವಕಪ್ ಆತಿಥ್ಯ ವಹಿಸಿರುವ ರಷ್ಯಾ ಪಂದ್ಯಾವಳಿಗಾಗಿ ಅತಿ ಹೆಚ್ಚು ಹಣ ಸುರಿದಿದೆ. ಫಿಫಾ ವಿಶ್ವಕಪ್ ಇತಿಹಾಸದಲ್ಲಿ ಇದು ಅತಿ ಹೆಚ್ಚಿನ ಹಣವಾಗಿದೆ.

ರಷ್ಯಾ ಫಿಫಾ ವಿಶ್ವಕಪ್ ಗಾಗಿ 88 ಸಾವಿರ ಕೋಟಿ ಹಣವನ್ನು ಖರ್ಚು ಮಾಡಿದೆ. ಫಿಫಾ ಆತಿಥ್ಯ ವಹಿಸಿರುವ ರಷ್ಯಾಗೆ ಇದ್ರಿಂದ 2.09 ಲಕ್ಷ ಕೋಟಿ ಲಾಭವಿದೆ. ರಷ್ಯಾ ಕ್ರೀಡೆ ಹಾಗೂ ಕ್ರೀಡಾ ಸಾಧನಗಳಿಗಾಗಿ 88 ಸಾವಿರ ಕೋಟಿ ಖರ್ಚು ಮಾಡಿದೆಯಂತೆ. ಇದ್ರಲ್ಲಿ ಶೇಕಡಾ 30ರಷ್ಟು (28 ಸಾವಿರ ಕೋಟಿ) ಕ್ರೀಡೆಗೆ ಖರ್ಚಾಗಿದೆ. ಶೇಕಡಾ 50ರಷ್ಟು ಸಾರಿಗೆ, ಆರೋಗ್ಯ, ಭದ್ರತೆಗೆ ಖರ್ಚು ಮಾಡಿದೆ. ಶೇಕಡಾ 20ರಷ್ಟು (14 ಸಾವಿರ ಕೋಟಿ) ಹೊಟೇಲ್ ಹಾಗೂ ಇತರೆ ಕೆಲಸಕ್ಕೆ ಖರ್ಚು ಮಾಡಲಾಗಿದೆ.

ರಷ್ಯಾ ದೀರ್ಘಾವಧಿಯಲ್ಲಿ ಇದ್ರ ಪ್ರಯೋಜನ ಪಡೆಯಲಿದೆ. 2023ರ ವೇಳೆಗೆ ರಷ್ಯಾಕ್ಕೆ 2.09 ಲಕ್ಷ ಕೋಟಿ ಲಾಭವಾಗಲಿದೆ. ವಿಶ್ವಕಪ್ ತಯಾರಿ ಸಂಬಂಧ ರಷ್ಯಾದಲ್ಲಿ 2.22 ಲಕ್ಷ ಉದ್ಯೋಗ ಸೃಷ್ಟಿಯಾಗಿತ್ತು.

ವಿಶ್ವಕಪ್ ಪಂದ್ಯಾವಳಿಯಲ್ಲಿ 14 ತಂಡ ಪಾಲ್ಗೊಳ್ಳಲಿದೆ. 104 ದೇಶಗಳ ಜನರು ಪಂದ್ಯಾವಳಿ ವೀಕ್ಷಣೆಗೆ ತೆರಳಲಿದ್ದಾರೆ.ಈವರೆಗೆ 10 ವಿಶ್ವಕಪ್ ನಡೆದಿದ್ದು, 12ನೇ ವಿಶ್ವಕಪ್ 2019ರಲ್ಲಿ ಇಂಗ್ಲೆಂಡ್ ನಲ್ಲಿ ನಡೆಯಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...