alex Certify
ಕನ್ನಡ ದುನಿಯಾ       Mobile App
       

Kannada Duniya

ಮೂರನೇ ಟೆಸ್ಟ್ ಗೆ ಭುವಿ, ಬೂಮ್ರಾ ಫಿಟ್…!

ಇಂಗ್ಲೆಂಡ್ ಪ್ರವಾಸದಲ್ಲಿ ಸೋಲಿನ ಸುಳಿಗೆ ಸಿಲುಕಿಕೊಂಡಿರುವ ಕೊಹ್ಲಿ ಪಡೆ, ಗೆಲುವಿನ ಜಪ ಮಾಡುತ್ತಿದೆ. 5 ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಬ್ಲೂ ಬಾಯ್ಸ್ 0-2 ರ ಹಿನ್ನಡೆ ಅನುಭವಿಸುತ್ತಿದೆ. ಮೂರನೇ ಟೆಸ್ಟ್ ನಲ್ಲಿ ಗೆಲುವಿನ ಮಾಯಾ ಜಿಂಕೆಯನ್ನು ಕಟ್ಟಿ ಹಾಕಲು ಪ್ಲಾನ್ ಮಾಡಿಕೊಳ್ಳಲಾಗಿದೆ.

ಬರ್ನಿಂಗ್ ಹ್ಯಾಮ್ ಹಾಗೂ ಲಾರ್ಡ್ಸ್ ಅಂಗಳದಲ್ಲಿ ತಂಡ ಅನುಭವಿಸಿದ ಸೋಲಿನಿಂದ ಕಂಗೆಟ್ಟ ಟೀಮ್ ಮ್ಯಾನೇಜ್ಮೆಂಟ್ ಅನುಭವಿಗಳತ್ತ ಮುಖ ಮಾಡಿದೆ. ಅಂದಹಾಗೆ ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಭುವನೇಶ್ವರ್ ಕುಮಾರ್ ಹಾಗೂ ಯಾರ್ಕರ್ ಸ್ಪೆಷಲಿಸ್ಟ್ ಜಸ್ಪ್ರೀತ್ ಬೂಮ್ರಾ ಎರಡು ಟೆಸ್ಟ್‌ನಲ್ಲಿ ಅಖಾಡಕ್ಕೆ ಇಳಿದಿರಲಿಲ್ಲ. ಆದ್ರೆ, ಮೂರನೇ ಟೆಸ್ಟ್ ಪಂದ್ಯದಲ್ಲಿ ಈ ಆಟಗಾರರು ಕಣಕ್ಕೆ ಇಳಿಯುವ ಲೆಕ್ಕಾಚಾರ ಹಾಕಿಕೊಳ್ಳಲಾಗಿದೆ. ಭುವಿ ಹಾಗೂ ಬೂಮ್ರಾ ಫಿಟ್ ಆಗಿರೋ ಸುದ್ದಿಗಳು ಡ್ರೆಸ್ಸಿಂಗ್ ರೂಮ್ ನಿಂದ ಹೊರ ಬರುತ್ತಿವೆ.

ಇನ್ನು ಕಳಪೆ ಪ್ರದರ್ಶನದಿಂದ ಟೀಕೆಗಳಿಗೆ ಆಹಾರವಾಗಿರುವ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಸ್ಥಾನದ ಮೇಲೆ ಅಪಾಯದ ತೂಗುಗತ್ತಿ ನೇತಾಡುತ್ತಿದೆ. ವೃದ್ಧಿಮನ್ ಸಹಾ ಅನುಪಸ್ಥಿತಿಯಲ್ಲಿ ತಂಡ ಸೇರಿಕೊಂಡಿದ್ದ ದಿನೇಶ್, ಸಿಕ್ಕ ಅವಕಾಶವನ್ನು ಕೈ ಚೆಲ್ಲಿದ್ದಾರೆ. ಪರಿಣಾಮ ವಿರಾಟ್ ಕೊಹ್ಲಿ ಯುವ ವಿಕೆಟ್ ಕೀಪರ್ ನತ್ತ ಮುಖ ಮಾಡಿದ್ದಾರೆ. ಐಪಿಎಲ್ ನಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿ ಎಲ್ಲರ ಗಮನ ಸೆಳೆದಿದ್ದ, ರಿಶಬ್ ಪಂತ್ ನಾಟಿಂಗ್ಹ್ಯಾಮ್ ಟೆಸ್ಟ್‌ನಲ್ಲಿ ಕಣಕ್ಕೆ ಇಳಿಯುವ ಸಾಧ್ಯತೆ ಇದೆ. ಇಂಗ್ಲೆಂಡ್ ವಿರುದ್ಧ ಅಬ್ಬರದ ಪ್ರದರ್ಶನ ನೀಡಲು ರಿಶಬ್ ತುದಿಗಾಲಲ್ಲಿ ನಿಂತಿದ್ದಾರೆ. ಏನೇ ಆಗಲಿ ಟೀಮ್ ಇಂಡಿಯಾ ಮೂರನೇ ಟೆಸ್ಟ್ ನಲ್ಲಿ ನ್ಯೂನತೆಗಳನ್ನು ಮೆಟ್ಟಿನಿಂತು, ಭರ್ಜರಿ ಪ್ರದರ್ಶನ ನೀಡಬೇಕಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...