alex Certify
ಕನ್ನಡ ದುನಿಯಾ       Mobile App
       

Kannada Duniya

ಗರ್ಭಿಣಿ ಸಾನಿಯಾ ಮಾಡಿದ ಸರ್ವ್ ಹೇಗಿತ್ತು ಗೊತ್ತಾ…?

ತಮ್ಮ ಆಕರ್ಷಕ ಸರ್ವ್ ಹಾಗೂ ಗ್ಯಾಪ್ ಶಾಟ್ ಗಳ ಮೂಲಕ ಎದುರಾಳಿ ಆಟಗಾರ್ತಿಯರಿಗೆ ಕಾಡುತ್ತಿದ್ದ, ಭಾರತದ ಸ್ಟಾರ್ ಟೆನಿಸ್ ತಾರೆ, ಸಾನಿಯಾ ಮಿರ್ಜಾ. ಸದ್ಯ ಸಾನಿಯಾ ಮಿರ್ಜಾ ತಾಯಿ ಆಗುವ ಸಂತಸದಲ್ಲಿದ್ದು, ಹಲವು ದಿನಗಳಿಂದ ರಾಕೆಟ್ ಹಿಡಿದು ಅಂಗಳಕ್ಕೆ ಇಳಿದಿಲ್ಲ.

ಆದ್ರೆ, ಇತ್ತೀಚಿಗೆ ಸಾಮಾಜಿಕ ತಾಣದಲ್ಲಿ ಸಾನಿಯಾ ಮಿರ್ಜಾರ ವಿಡಿಯೋ ಸಖತ್ ವೈರಲ್ ಆಗ್ತಾ ಇದೆ. ಕಾವು ಗರ್ಭಿಣಿ ಎಂಬುದನ್ನೂ ಲೆಕ್ಕಿಸದೆ ಸಾನಿಯಾ ತನ್ನ ಸಹೋದರಿಯ ಜೊತೆ ಟೆನಿಸ್ ಆಡುವ ದೃಶ್ಯಗಳು ಅಭಿಮಾನಿಗಳ ಮನ ಗೆಲ್ಲುತ್ತಿವೆ.

ಒಂದು ಬದಿ ಗ್ರ್ಯಾಂಡ್ ಸ್ಲ್ಯಾಮ್ ವಿಜೇತೆ ಸಾನಿಯಾ ಕಂಡ್ರೆ, ಇನ್ನೊಂದು ಬದಿ ಸಹೋದರಿ ಅನಮ್ ಬ್ಯಾಟ್ ಹಿಡಿದು ಅಕ್ಕನ ಸವಾಲು ಸ್ವೀಕರಿಸಲು ರೆಡಿಯಾಗಿದ್ದಾರೆ. ತಮ್ಮ ಹೆಣ್ಣು ಮಕ್ಕಳ ಟೆನಿಸ್ ಕೌಶಲ್ಯವನ್ನು ಕಣ್ಣು ತುಂಬಿಕೊಳ್ಳಲು, ಸಾನಿಯಾರ ತಂದೆ ಸಹ ಕೋರ್ಟ್ ಮಧ್ಯದಲ್ಲೇ ನಿಂತು ಆಟ ಆನಂದಿಸುತ್ತಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಅಪ್ ಲೋಡ್ ಆಗುತ್ತಿದ್ದಂತೆ 7000 ಜನ ನೋಡಿ ಖುಷಿ ಪಟ್ಟಿದ್ದಾರೆ. ಇನ್ನು ಈ ವಿಡಿಯೋಗೆ ಸಾಕಷ್ಟು ಲೈಕ್ ಸಿಕ್ಕಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...