alex Certify
ಕನ್ನಡ ದುನಿಯಾ       Mobile App
       

Kannada Duniya

ಏಷ್ಯನ್‌ ಕ್ರೀಡಾಕೂಟದಿಂದ ಉತ್ತರ ಕೊರಿಯಾದ ಬಾಕ್ಸಿಂಗ್ ಕೋಚ್ ಗಳ ಕಿಕ್ ಔಟ್

ಏಷ್ಯನ್ ಕ್ರೀಡಾಕೂಟದ ಫ್ಲೈವೇಟ್ ವಿಭಾಗದ ಫೈನಲ್ ನಲ್ಲಿ ಉತ್ತರ ಕೊರಿಯಾ ಮಹಿಳಾ ಬಾಕ್ಸರ್ ಗಳು ಸೋತ ಹಿನ್ನಲೆಯಲ್ಲಿ ಕೋಚ್ ಗಳು ಪ್ರತಿಭಟನೆ ನಡೆಸಲು ಆರಂಭಿಸಿದ್ದರು. ಅಲ್ಲದೇ ರಿಂಗ್ ಬಿಟ್ಟು ತೆರಳದೇ ಅಡ್ಡಪಡಿಸಿದ್ದರು. ಈ ಹಿನ್ನಲೆಯಲ್ಲಿ ಶಿಸ್ತುಕ್ರಮವಾಗಿ ಏಷ್ಯನ್ ಕ್ರೀಡಾ ಕೂಟದಿಂದಲೇ ಇಬ್ಬರು ಕೋಚ್ ಗಳನ್ನು ಹೊರದಬ್ಬಲಾಗಿದೆ.

ಚೀನಾದ ಚಾಂಗ್ ಯಾನ್ ಎದುರು ನಡೆದ ಫೈನಲ್‌ ಪಂದ್ಯದಲ್ಲಿ ಉತ್ತರ ಕೊರಿಯಾದ ಪಂಗ್ ಚೋಲ್‌ ಮಿ 3–2ರಿಂದ ಸೋಲನ್ನಪ್ಪಿದ್ದರು. ಇದರಿಂದ ಪಂಗ್ ಚೋಲ್‌ ಮಿ ಅವರ ಕೋಚ್‌ ಪಕ್ ಚೊಲ್ ಜುನ್, ರಿಂಗ್ ಬಿಟ್ಟು ತೆರಳಲು ನಿರಾಕರಿಸಿದ್ದಾರೆ. ಅಲ್ಲದೇ ಪಂಗ್ ಚೋಲ್‌ ಮಿ ಅವರಿಗೂ ಅಲ್ಲೇ ನಿಲ್ಲುವಂತೆ ಸೂಚಿಸಿ ಪ್ರತಿಭಟಿಸಲು ಆರಂಭಿಸಿದ್ದರು. ಉಳಿದ ಸ್ಪರ್ಧಿಗಳಿಗೆ ಅಡ್ಡಿಪಡಿಸುತ್ತಿರುವ ಹಿನ್ನಲೆಯಲ್ಲಿ ಸ್ಥಳಕ್ಕೆ ಆಗಮಿಸಿದ ಪೊಲೀಸರು ಹಾಗೂ ಭದ್ರತಾ ಸಿಬ್ಬಂದಿಗಳು ಕೋಚ್‌ ಪಕ್ ಚೊಲ್ ರನ್ನು ಹೊರಕರೆದೊಯ್ದಿದ್ದಾರೆ.

ಇದೇ ವೇಳೆ ಮತ್ತೊರ್ವ ಕೋಚ್‌ ಪಕ್ ಇಲ್‌ ನಾಮ್‌ ಎಂಬುವವರು ರೆಫರಿಗಳ ವಿರುದ್ಧವೇ ಸಿಡಿದೆದ್ದು, ಬಾಯಿಗೆ ಬಂದಂತೆ ಮಾತನಾಡಿದ್ದು, ಇದರಿಂದ ಪಕ್ ಇಲ್ ನಾಮ್ ವಿರುದ್ಧವೂ ಕ್ರಮ ಕೈಗೊಂಡು, ಅವರನ್ನೂ ಕ್ರೀಡಾಕೂಟದಿಂದ ಹೊರಹಾಕಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...