alex Certify
ಕನ್ನಡ ದುನಿಯಾ       Mobile App
       

Kannada Duniya

ಇದೇ ಕಾರಣಕ್ಕೆ ಇಷ್ಟವಾಗ್ತಾರೆ ರಾಹುಲ್ ದ್ರಾವಿಡ್

ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ರಾಹುಲ್ ದ್ರಾವಿಡ್ ಅವರ ಫೋಟೋ ಒಂದು ಜಾಲತಾಣದಲ್ಲಿ ವೈರಲ್ ಆಗಿದೆ. ಸರಳ ವ್ಯಕ್ತಿತ್ವದ ರಾಹುಲ್ ದ್ರಾವಿಡ್ ಅವರು ತಮ್ಮ ನಡವಳಿಕೆಯಿಂದಲೇ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಸೆಲೆಬ್ರೆಟಿಯಾಗಿಯೂ ಅವರು ಜನಸಾಮಾನ್ಯರಂತೆ ಇರುತ್ತಾರೆ ಎಂಬುದಕ್ಕೆ ಈ ಫೋಟೋ ಉದಾಹರಣೆಯಂತಿದೆ. ಅಮೋಘ ಸಾಧನೆ ಮಾಡಿದ್ದರೂ ಅದನ್ನು ತೋರಗೊಡದೇ ದ್ರಾವಿಡ್ ಮಕ್ಕಳ ಜೊತೆಗೆ ವಿಜ್ಞಾನ ಮೇಳಕ್ಕೆ ಹೋಗಿ ಸರದಿ ಸಾಲಿನಲ್ಲಿ ನಿಂತು ವೀಕ್ಷಿಸಿದ್ದಾರೆ.

ಮೈದಾನದಲ್ಲಿ ಎಂತಹ ಒತ್ತಡದ ಸಂದರ್ಭದಲ್ಲಿಯೂ ತಾಳ್ಮೆ ಕಳೆದುಕೊಳ್ಳದ ದ್ರಾವಿಡ್ ಸಂಯಮದಿಂದಲೇ ವರ್ತಿಸುತ್ತಿದ್ದರು. ಹಲವಾರು ದಾಖಲೆ ಬರೆದ ಅವರು, ಕೋಚ್ ಆಗಿ ಭಾರತ ಅಂಡರ್ -19 ತಂಡವನ್ನು ಯಶಸ್ವಿ ತಂಡವಾಗಿ ರೂಪಿಸಿದ್ದಾರೆ.

ಅವರು ಮಕ್ಕಳೊಂದಿಗೆ ವಿಜ್ಞಾನ ಮೇಳಕ್ಕೆ ತೆರಳಿ ಬೇರೆ ಪೋಷಕರಂತೆಯೇ ಸರದಿ ಸಾಲಿನಲ್ಲಿ ನಿಂತುಕೊಂಡಿರುವ ಫೋಟೋಗೆ ಭಾರೀ ಪ್ರಶಂಸೆ ವ್ಯಕ್ತವಾಗಿದೆ. ರಾಹುಲ್ ಅವರ ಮಗ ಓದುತ್ತಿರುವ ಶಾಲೆಯ ಶಿಕ್ಷಕಿಯೊಬ್ಬರ ಸಹೋದರ ಈ ಫೋಟೋ ಹಾಕಿದ್ದು, ವೈರಲ್ ಆಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...