alex Certify
ಕನ್ನಡ ದುನಿಯಾ       Mobile App
       

Kannada Duniya

ಎರಡು ಕೈಗಳಿಲ್ಲದಿದ್ದರೂ ಈತ ಕ್ರಿಕೆಟ್ ಟೀಂ ಕ್ಯಾಪ್ಟನ್

amir

ಜೀವನದಲ್ಲಿ ಬರುವ ಸವಾಲುಗಳನ್ನು ಎದುರಿಸಲು ಸಾಧ್ಯವಾಗದ ವೇಳೆ ಜನ ದೂರೋದು ಅದೃಷ್ಟವನ್ನು.  ಮತ್ತೆ ಕೆಲವರು ಅದೃಷ್ಟವನ್ನು ನಂಬಿ ಕೂರದೇ ಸವಾಲುಗಳನ್ನು ಧೈರ್ಯವಾಗಿ ಎದುರಿಸಿ ಸಾಧಿಸಿ ತೋರಿಸುತ್ತಾರೆ. ಛಲಬಿಡದೆ ಹೋರಾಡಿ ಎಲ್ಲರಿಗೂ ಆದರ್ಶವಾಗ್ತಾರೆ.

ತಮ್ಮ ಕಷ್ಟಕ್ಕೆ ಬೇರೆಯವರನ್ನು ಹೊಣೆ ಮಾಡಿ, ಜೀವನವೇ ಬೇಡ ಎಂದು ಕೂರುವ ಜನರಿಗೆ ಅಮೀರ್ ಹುಸೇನ್ ಸ್ಪೂರ್ತಿ. ಅಮೀರ್ 8 ವರ್ಷದವನಿರುವಾಗಲೇ ಎರಡೂ ಕೈಗಳನ್ನು ಕಳೆದುಕೊಂಡಿದ್ದಾರೆ. ಆದ್ರೆ ಅವರ ಉತ್ಸಾಹ ಆಸೆ ಮಾತ್ರ ಬತ್ತಿರಲಿಲ್ಲ. ಛಲ ಬಿಡದೇ ಹೋರಾಡಿ ಈಗ ಸಾಧಿಸಿ ತೋರಿಸಿದ್ದಾರೆ ಅವರು.

ಎರಡೂ ಕೈಗಳಿಲ್ಲದ 26 ವರ್ಷದ ಅಮೀರ್, ಜಮ್ಮು-ಕಾಶ್ಮೀರದ ಪ್ಯಾರಾ ಕ್ರಿಕೆಟ್ ತಂಡದ ನಾಯಕ. ಅವರ ಆಟಕ್ಕೆ ಅಭಿಮಾನಿಗಳು ಸೋತು ಹೋಗಿದ್ದಾರೆ. ಭೇಷ್ ಎಂದು ಬೆನ್ನು ತಟ್ಟಿದ್ದಾರೆ. barcroft tv ಅಮೀರ್ ಹುಸೇನ್ ಸ್ಫೂರ್ತಿದಾಯಕ ವಿಡಿಯೋ ರಿಲೀಸ್ ಮಾಡಿದೆ. ನೀವೂ ಒಮ್ಮೆ ನೋಡಿ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...