alex Certify
ಕನ್ನಡ ದುನಿಯಾ       Mobile App
       

Kannada Duniya

ರವಿ ಶಾಸ್ತ್ರಿ ಜೊತೆಗಿನ ಡೇಟಿಂಗ್ ಕುರಿತು ನಟಿ ಹೇಳಿದ್ದೇನು?

ಮುಂಬೈ: ಇಂಗ್ಲೆಂಡ್ ವಿರುದ್ಧದ 4ನೇ ಟೆಸ್ಟ್ ಪಂದ್ಯದಲ್ಲಿ ಸೋಲುಂಡು ಸರಣಿ ಗೆಲ್ಲುವ ಅವಕಾಶವನ್ನು ಕೈಚೆಲ್ಲಿರುವ ಟೀಂ ಇಂಡಿಯಾ ಕುರಿತು ತೀವ್ರ ಅಸಮಾಧಾನಗಳು ವ್ಯಕ್ತವಾಗುತ್ತಿರುವ ನಡುವೆಯೇ ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ ಹಾಗೂ ಬಾಲಿವುಡ್ ನಟಿ ನಡುವಿನ ಡೇಟಿಂಗ್ ವಿಚಾರ ಈಗ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಹೌದು. ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ ಹಾಗೂ ನಟಿ ನಿಮ್ರತ್ ಕೌರ್ ಡೇಟಿಂಗ್ ನಡೆಸುತ್ತಿದ್ದಾರೆ ಎಂಬ ಸುದ್ದಿ ಈಗ ಎಲ್ಲೆಡೆ ಹರಿದಾಡುತ್ತಿದೆ. 36ರ ಹರೆಯದ ನಿಮ್ರತ್ ಕೌರ್, 56 ವರ್ಷದ ರವಿಶಾಸ್ತ್ರಿ ಜತೆ ಕಳೆದ 2 ವರ್ಷಗಳಿಂದ ಗೌಪ್ಯವಾಗಿ ಡೇಟಿಂಗ್ ನಡೆಸುತ್ತಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

ಆದರೆ ರವಿಶಾಸ್ತ್ರಿ ಜತೆ ಡೇಟಿಂಗ್ ವಿಚಾರಕ್ಕೆ ಪ್ರತಿಕ್ರಿಯೆ ನೀಡಿರುವ ನಿಮ್ರತ್ ಕೌರ್, ಇದು ಕೇವಲ ವದಂತಿಯಷ್ಟೇ. ತಾನು ಯಾರೊಂದಿಗೂ ಡೇಟಿಂಗ್ ನಡೆಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಒಟ್ಟಿನಲ್ಲಿ ಸದಾ ಸುದ್ದಿಯಲ್ಲಿರುವ ರವಿಶಾಸ್ತ್ರಿ 30 ವರ್ಷದ ಹಿಂದೆ ನಟಿ ಅಮೃತಾ ಸಿಂಗ್ ಜತೆ ಡೇಟಿಂಗ್ ನಡೆಸಿ ಸುದ್ದಿಯಾಗಿ, ಬಳಿಕ ರಿತೂ ಸಿಂಗ್ ಜತೆ ವಿವಾಹವಾಗಿ, 1990ರಲ್ಲಿ ಪತ್ನಿಯಿಂದ ದೂರವಾಗಿದ್ದರು. ಈಗ ನಿಮ್ರತ್ ಕೌರ್ ಜತೆ ಡೇಟಿಂಗ್ ನಡೆಸುತ್ತಿದ್ದಾರೆಂಬ ಕಾರಣಕ್ಕೆ ಸುದ್ದಿಯಲ್ಲಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...