alex Certify
ಕನ್ನಡ ದುನಿಯಾ       Mobile App
       

Kannada Duniya

ಟೀಂ ಇಂಡಿಯಾವನ್ನು ಬೆಂಬಲಿಸಿದ ಸಾನಿಯಾ

ಶ್ರೀಲಂಕಾದಲ್ಲಿ ನಡೆಯುತ್ತಿರುವ ತ್ರಿಕೋನ ಸರಣಿಯಲ್ಲಿ ಭಾರತ ಮೊದಲ ಗೆಲುವು ದಾಖಲಿಸಿದೆ. ಸಂಘಟಿತ ಆಟದ ಮೂಲಕ ರೋಹಿತ್ ಪಡೆ, ಶ್ರೀಲಂಕಾ ತಂಡವನ್ನು 6 ವಿಕೆಟ್ ಗಳಿಂದ ಮಣಿಸಿದೆ. ಭಾರತದ ಗೆಲುವನ್ನು ಪಾಕಿಸ್ತಾನದ ಸೊಸೆ ಸಾನಿಯಾ ಮಿರ್ಜಾ ಕೂಡ ಸಂಭ್ರಮಿಸಿದ್ದಾರೆ.

ಮನೆಯಲ್ಲಿ ಆರಾಮಾಗಿ ಮಲಗಿಕೊಂಡು ಮ್ಯಾಚ್ ವೀಕ್ಷಿಸ್ತಾ ಇರೋ ಫೋಟೋವನ್ನು ಸಾನಿಯಾ ಟ್ವೀಟ್ ಮಾಡಿದ್ದಾರೆ. ಅಷ್ಟೇ ಅಲ್ಲ ಟೀಂ ಇಂಡಿಯಾ ಆಟಗಾರರಿಗೆ ಚಿಯರ್ ಅಪ್ ಮಾಡಿದ್ದಾರೆ.

ಜೊತೆಗೆ ತಮ್ಮ ಮನೆಯಲ್ಲಿ ಕನಿಷ್ಟ ಒಂದು ಟಿವಿಯಲ್ಲಾದ್ರೂ, ಇಡೀ ದಿನ ಸ್ಪೋರ್ಟ್ಸ್ ಚಾನೆಲ್ ಆನ್ ಆಗಿರುತ್ತೆ ಅನ್ನೋ ಸತ್ಯವನ್ನು ಬಹಿರಂಗಪಡಿಸಿದ್ದಾರೆ.

ಸಾನಿಯಾ ಪಾಕಿಸ್ತಾನದ ಕ್ರಿಕೆಟಿಗ ಶೋಯೆಬ್ ಮಲಿಕ್ ರನ್ನು ಮದುವೆಯಾದಾಗಿದ್ರೂ, ತವರಿನ ತಂಡಕ್ಕೇ ಜೈ ಅನ್ನುತ್ತಿರುವುದು ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...