alex Certify
ಕನ್ನಡ ದುನಿಯಾ       Mobile App
       

Kannada Duniya

ಕ್ರಿಕೆಟ್ ಅಭಿಮಾನಿಗಳಿಗೆ ಖುಷಿ ಸುದ್ದಿ ನೀಡಿದ ಜಿಯೋ ಟಿವಿ

ಭಾರತದ ಜನಪ್ರಿಯ ಲೈವ್ ಟಿವಿ ಜಿಯೋ ಆ್ಯಪ್ ಶುಕ್ರವಾರ ಕ್ರಿಕೆಟ್ ಪ್ರಿಯರಿಗೆ ಖುಷಿ ಸುದ್ದಿ ನೀಡಿದೆ. ನಿದಾಹಾಸ್ ತ್ರಿಕೋನ ಕ್ರಿಕೆಟ್ ಸರಣಿಯನ್ನು ಪ್ರೇಕ್ಷಕರು ಜಿಯೋ ಆ್ಯಪ್ ನಲ್ಲಿ ಹೊಸ ಶೈಲಿಯಲ್ಲಿ ಲೈವ್ ನೋಡಬಹುದಾಗಿದೆ.

ಕ್ರಿಕೆಟ್ ಪ್ರಿಯರು ನಿದಾಹಾಸ್ ಕ್ರಿಕೆಟ್ ಸರಣಿಯೊಂದೇ ಅಲ್ಲ ಭಾರತದ ಎಲ್ಲ ಕ್ರಿಕೆಟ್ ಪಂದ್ಯಗಳನ್ನೂ ಆ್ಯಪ್ ಮೂಲಕ ವೀಕ್ಷಣೆ ಮಾಡಬಹುದಾಗಿದೆ. ಇದ್ರ ಜೊತೆಗೆ ಇನ್ನೂ ಅನೇಕ ಹೊಸ ಸೌಲಭ್ಯಗಳನ್ನು ಆ್ಯಪ್ ನಲ್ಲಿ ನೀಡಲಾಗಿದೆ. ಪ್ರೇಕ್ಷಕರು ತಮಗಿಷ್ಟವಾಗುವ ಕೋನದಿಂದ ಕ್ರಿಕೆಟ್ ವೀಕ್ಷಣೆ ಮಾಡಬಹುದು. ಅಂದ್ರೆ ಜಿಯೋ ಟಿವಿ ಆ್ಯಪ್ ನಲ್ಲಿ ಐದು ವಿಭಿನ್ನ ಕ್ಯಾಮರಾಗಳನ್ನು ನೀಡಲಾಗಿದೆ. ಈ ಕ್ಯಾಮರಾದಲ್ಲಿ ಪ್ರೇಕ್ಷಕ ತನಗೆ ಬೇಕಾದ ಕ್ಯಾಮರಾ ಆಯ್ಕೆ ಮಾಡಿಕೊಳ್ಳಬಹುದಾಗಿದೆ.

ಸ್ಟಂಪ್ ಮೈಕ್ ಹಾಗೂ ಕ್ರೀಡಾಂಗಣದ ನೈಜ ಧ್ವನಿ ಪ್ರೇಕ್ಷಕರಿಗೆ ಲಭ್ಯವಾಗಲಿದೆ. ಜೊತೆಗೆ ಕನ್ನಡ, ಹಿಂದಿ, ಇಂಗ್ಲೀಷ್, ತಮಿಳು ಹಾಗೂ ತೆಲಗು ಭಾಷೆಯಲ್ಲಿ ಕಾಮೆಂಟ್ರಿ ಕೇಳಬಹುದಾಗಿದೆ. ಜಹೀರ್ ಖಾನ್, ಆಶಿಶ್ ನೆಹ್ರಾ ಮತ್ತು ಗೌರವ್ ಕಪೂರ್ ಸೇರಿದಂತೆ ಪ್ರಮುಖ ಕ್ರಿಕೆಟ್ ತಜ್ಞರ ಕಾಮೆಂಟ್ರಿ ಕೇಳುವ ಅವಕಾಶ ಸಿಗಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...