alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಕ್ರಿಕೆಟಿಗರ ನಿಕ್ ನೇಮ್ ಏನೇನು ಗೊತ್ತಾ…?

40741442982753gabbar-shikhar

ತಂದೆ, ತಾಯಿ ನಾಮಕರಣದ ಸಂದರ್ಭದಲ್ಲಿ ಇಟ್ಟ ಹೆಸರಿಗಿಂತ ಪ್ರೀತಿಯಿಂದ ಕರೆಯುವ ಹೆಸರುಗಳೇ ಒಮ್ಮೊಮ್ಮೆ ಹೆಚ್ಚು ಫೇಮಸ್ ಆಗುತ್ತವೆ. ಆ ವ್ಯಕ್ತಿಯ ಹಾವಭಾವಗಳೂ ಕೂಡ ನಿಕ್ ನೇಮ್ ಆಗಿಬಿಡುತ್ತವೆ.

ವಿಶ್ವದ ಕ್ರಿಕೆಟ್ ಆಟಗಾರರನ್ನು ಯಾವ ಯಾವ ತಮಾಷೆಯ ನಿಕ್ ನೇಮ್ ಗಳಿಂದ ಕರೆಯಲಾಗುತ್ತದೆ ಎಂಬುದನ್ನು ನೀವೇ ನೋಡಿ. ವಿರಾಟ್ ಕೊಹ್ಲಿಗೆ ಆತನ ಕೋಚ್ ಅಜಿತ್ ಚೌಧರಿ ಪ್ರೀತಿಯಿಂದ ಕರೆದ ‘ಚಿಕ್ಕು’ ಹೆಸರೇ ಇಂದಿಗೂ ಸಹ ಆಟಗಾರರಿಂದ ಕರೆಯಲ್ಪಡುತ್ತಿದೆ. ಪಾಕ್ ನ ಬೌಲರ್ ಉಮರ್ ಗುಲ್ ಅವರಿಗೆ ‘ಪೇಶಾವರ್ ರಿಕ್ಷಾ’ ಎಂಬ ಅಡ್ಡ ಹೆಸರಿದೆ. ಆಸಿಸ್ ಆಟಗಾರ ಮೈಕೆಲ್ ಕ್ಲಾರ್ಕ್ ‘ಪಪ್’ ಹೆಸರಿನಿಂದ ಜನಪ್ರಿಯರಾಗಿದ್ದಾರೆ.

ಆಸಿಸ್ ವಿರುದ್ಧದ ಪಂದ್ಯಗಳಲ್ಲಿ ಸತತ ಏಳು ಬಾರಿ ಶೂನ್ಯಕ್ಕೆ ಔಟಾಗಿದ್ದ ಅಜಿತ್ ಅಗರ್ಕರ್ ‘ಬಾಂಬೆ ಡಕ್’ ಎನಿಸಿಕೊಳ್ಳುವುದು ತಪ್ಪೇನಿಲ್ಲ ಎನ್ನುತ್ತೀರಾ…? ರಣಜಿ ಪಂದ್ಯ ಆಡುವಾಗ ಸಹ ಆಟಗಾರರು ತಪ್ಪು ಮಾಡಿದಾಗ ಪ್ರೀತಿಯಿಂದಲೇ ‘ಸುವರ್ ಕೇ ಬಚ್ಚೆ’ ಎಂದು ಶೋಲೆ ಚಿತ್ರದ ಡೈಲಾಗ್ ಮೂಲಕ ಗದರುತ್ತಿದ್ದ ಶಿಖರ್ ಧವನ್ ಅವರಿಗೆ ‘ಗಬ್ಬರ್’ ಎಂಬ ನಿಕ್ ನೇಮ್ ಇದೆ.

ಅದೇ ರೀತಿ ರವೀಂದ್ರ ಜಡೇಜರನ್ನು ‘ಸರ್’ ಎಂದು, ರವಿಚಂದ್ರನ್ ಅಶ್ವಿನ್ ಅವರಿಗೆ ‘ಆಶ್’ ಎಂದು ಕರೆಯಲಾಗುತ್ತದೆ. ಮಗುವಿನಂತಿರುವ ಪಾರ್ಥಿವ್ ಪಟೇಲ್ ಗೆ ‘ಬಚ್ಚಾ’, ಇಂಜಮಾಮ್ ಉಲ್ ಹಕ್ ಗೆ ‘ಇಂಜಿ’ ಅಥವಾ ‘ಆಲೂ’, ಅಜಿಂಕ್ಯ ರೆಹಾನೆಯನ್ನು ‘ಜಿಂಕ್ಸ್’ ಎಂದು ಪ್ರೀತಿಯಿಂದ ಕರೆಯಲಾಗುತ್ತದೆ. ಈ ಆಟಗಾರರು ಸ್ವಂತ ಹೆಸರಿಗಿಂತ ಹೆಚ್ಚಾಗಿ ಅಡ್ಡ ಹೆಸರಿನಿಂದಲೇ ಸಖತ್ ಫೇಮಸ್ ಆಗಿರುವುದು ವಿಶೇಷವಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...