alex Certify
ಕನ್ನಡ ದುನಿಯಾ       Mobile App
       

Kannada Duniya

ಶತಕ ಸಿಡಿಸಿ ಹೊಸ ದಾಖಲೆ ಬರೆದ ಕಿವೀಸ್ ನಾಯಕ

ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ದಾಖಲೆಯ 18ನೇ ಶತಕ ಸಿಡಿಸಿದ್ದಾರೆ. ಈಡನ್ ಪಾರ್ಕ್ ನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ನಲ್ಲಿ ಕೇನ್ ಈ ಸಾಧನೆ ಮಾಡಿದ್ದಾರೆ.

220 ಬಾಲ್ ಗಳಲ್ಲಿ 102 ರನ್ ಬಾರಿಸಿದ ಕೇನ್, ರೋಸ್ ಟೇಲರ್ ಹಾಗೂ ಮಾರ್ಟಿನ್ ಕ್ರೋವ್ ದಾಖಲೆಯನ್ನು ಹಿಂದಿಕ್ಕಿದ್ರು. ನ್ಯೂಜಿಲೆಂಡ್ ಪರ ಅತಿ ಹೆಚ್ಚು ಶತಕ ಬಾರಿಸಿದ ಆಟಗಾರ ಎನಿಸಿಕೊಂಡ್ರು.

27ರ ಹರೆಯದ ಕೇನ್ ವಿಲಿಯಮ್ಸನ್ 67 ಟೆಸ್ಟ್ ಆಡಿದ್ದು 114 ಇನ್ನಿಂಗ್ಸ್ ನಲ್ಲಿ 18 ಶತಕ ಸಿಡಿಸಿದ್ದಾರೆ. ರೋಸ್ ಟೇಲರ್ 83 ಟೆಸ್ಟ್ ಗಳಲ್ಲಿ ಆಡಿ, 17 ಶತಕ ಬಾರಿಸಿದ್ದರು. ಮಾರ್ಟಿನ್ ಕ್ರೋವ್ 77 ಟೆಸ್ಟ್ ಗಳಲ್ಲಿ ಈ ಸಾಧನೆ ಮಾಡಿದ್ದರು. 2010ರಲ್ಲಿ ಚೊಚ್ಚಲ ಟೆಸ್ಟ್ ನಲ್ಲೇ ಶತಕ ಸಿಡಿಸುವ ಮೂಲಕ ಕೇನ್ ಸೆಂಚುರಿಗಳ ಖಾತೆ ತೆರೆದಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...