alex Certify
ಕನ್ನಡ ದುನಿಯಾ       Mobile App
       

Kannada Duniya

ಟೆಸ್ಟ್ ಕ್ರಿಕೆಟ್ ನಲ್ಲಿ ಇಂಗ್ಲೆಂಡ್ ವೇಗಿಯ ಹೊಸ ದಾಖಲೆ

ನ್ಯೂಜಿಲೆಂಡ್ ವಿರುದ್ಧದ ಎರಡನೇ ಟೆಸ್ಟ್ ನಲ್ಲಿ ಇಂಗ್ಲೆಂಡ್ ನ ವೇಗದ ಬೌಲರ್ ಜೇಮ್ಸ್ ಆ್ಯಂಡರ್ಸನ್ ಹೊಸ ದಾಖಲೆ ಮಾಡಿದ್ದಾರೆ. ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿಯೇ ಅತಿ ಹೆಚ್ಚು ಲೀಗಲ್ ಬಾಲ್ ಹಾಕಿದ ವೇಗದ ಬೌಲರ್ ಎನಿಸಿಕೊಂಡಿದ್ದಾರೆ.

ವೆಸ್ಟ್ ಇಂಡೀಸ್ ನ ಕರ್ಟ್ನಿ ವಾಲ್ಷ್ ರನ್ನು ಆ್ಯಂಡರ್ಸನ್ ಹಿಂದಿಕ್ಕಿದ್ದಾರೆ. ಪಂದ್ಯದ 56ನೇ ಓವರ್ ನಲ್ಲಿ ಆ್ಯಂಡರ್ಸನ್ ಈ ದಾಖಲೆ ಮಾಡಿದ್ರು. ಅವರು ಎಸೆದಿರೋ ಲೀಗಲ್ ಡೆಲಿವರಿಗಳ ಸಂಖ್ಯೆ 30,020. ಅಷ್ಟೇ ಅಲ್ಲ ಟೆಸ್ಟ್ ಕ್ರಿಕೆಟ್ ನಲ್ಲಿ 5000 ಓವರ್ ಬೌಲಿಂಗ್ ಮಾಡಿದ ದಾಖಲೆ ಸಹ ಆ್ಯಂಡರ್ಸನ್ ಪಾಲಾಗಿದೆ.

ಈ ಹಿಂದೆ ಕರ್ಟ್ನಿ ವಾಲ್ಷ್ 30,019 ಲೀಗಲ್ ಬಾಲ್ ಗಳನ್ನು ಹಾಕಿದ್ದರು. ಸ್ಪಿನ್ನರ್ ಗಳ ಪೈಕಿ ಮೊದಲ ಸ್ಥಾನದಲ್ಲಿರೋ ಮುತ್ತಯ್ಯ ಮುರಳೀಧರನ್ 44,039, ಅನಿಲ್ ಕುಂಬ್ಳೆ 40,850 ಹಾಗೂ ಶೇನ್ ವಾರ್ನ್ 40,705 ಲೀಗಲ್ ಡೆಲಿವರಿಗಳನ್ನು ಎಸೆದಿದ್ದಾರೆ.

ಕರ್ಟ್ನಿ ವಾಲ್ಷ್ 24.4ರ ಸರಾಸರಿಯಲ್ಲಿ ಒಟ್ಟು 519 ವಿಕೆಟ್ ಗಳನ್ನು ಪಡೆದಿದ್ದರು. ಆ್ಯಂಡರ್ಸನ್ 27.34ರ ಸರಾಸರಿಯಲ್ಲಿ 534 ವಿಕೆಟ್ ಗಳನ್ನು ಈಗಾಗ್ಲೇ ಕಬಳಿಸಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...