alex Certify
ಕನ್ನಡ ದುನಿಯಾ       Mobile App
       

Kannada Duniya

ಸೀಮಿತ ಓವರ್ ಸರಣಿ: ಭಾರತಕ್ಕೆ ಬಂದ ನ್ಯೂಜಿಲೆಂಡ್ ಟೀಂ

ಮುಂಬೈ: ಭಾರತದ ವಿರುದ್ಧ ಸೀಮಿತ ಓವರ್ ಪಂದ್ಯಗಳ ಸರಣಿಯನ್ನಾಡಲು ನ್ಯೂಜಿಲೆಂಡ್ ಕ್ರಿಕೆಟ್ ತಂಡದ ಆಟಗಾರರು ಆಗಮಿಸಿದ್ದಾರೆ.

ಅಕ್ಟೋಬರ್ 22 ರಿಂದ ಪಂದ್ಯ ಆರಂಭವಾಗಲಿದ್ದು, 9 ಮಂದಿಯ ಆಟಗಾರರ ತಂಡ ಮುಂಬೈಗೆ ಆಗಮಿಸಿದೆ. ಈಗಾಗಲೇ ನ್ಯೂಜಿಲೆಂಡ್ ‘ಎ’ ತಂಡ ಭಾರತ ಪ್ರವಾಸದಲ್ಲಿದ್ದು, ಈ ತಂಡದಿಂದ 6 ಮಂದಿಯನ್ನು ಆಯ್ಕೆಮಾಡಿಕೊಳ್ಳಲಾಗುವುದು.

ಅಕ್ಟೋಬರ್ 17 ಮತ್ತು 19 ರಂದು ಮಂಡಳಿ ಅಧ್ಯಕ್ಷರ ಇಲೆವನ್ ತಂಡದ ವಿರುದ್ಧ ಅಭ್ಯಾಸ ಪಂದ್ಯಗಳು ನಡೆಯಲಿವೆ. ಅಕ್ಟೋಬರ್ 22 ರಿಂದ ನವೆಂಬರ್ 7 ರ ವರೆಗೆ 3 ಏಕದಿನ ಹಾಗೂ 3 ಟಿ -20 ಪಂದ್ಯಗಳು ನಡೆಯಲಿವೆ.

ಏಕದಿನ ಪಂದ್ಯಗಳು: ಅಕ್ಟೋಬರ್ 22 ರಂದು ಮುಂಬೈ, ಅಕ್ಟೋಬರ್ 25 ರಂದು ಪುಣೆ, ಅಕ್ಟೋಬರ್ 29 ರಂದು ಕಾನ್ಪುರ್.

ಟಿ -20 ಪಂದ್ಯಗಳು: ನವೆಂಬರ್ 1 ರಂದು ನವದೆಹಲಿ, ನವೆಂಬರ್ 4 ರಂದು ರಾಜ್ ಕೋಟ್, ನವೆಂಬರ್ 7 ರಂದು ತಿರುವನಂತಪುರಂ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...