alex Certify
ಕನ್ನಡ ದುನಿಯಾ       Mobile App
       

Kannada Duniya

ಟಿ -20 ಯಲ್ಲಿ 3 ಶತಕ ಗಳಿಸಿ ದಾಖಲೆ ಬರೆದ ಕಾಲಿನ್

0, 101, 0, 0, 7, 109*, 7, 53, 66, 104 ಇದು ಕಳೆದ 10 ಟಿ -20 ಇನ್ನಿಂಗ್ಸ್ ಗಳಲ್ಲಿ ನ್ಯೂಜಿಲೆಂಡ್ ಆಟಗಾರ ಕಾಲಿನ್ ಮನ್ರೋ ಗಳಿಸಿದ ರನ್ ಗಳು.

ಟಿ -20 ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸುತ್ತಿರುವ ಕಾಲಿನ್ ಮನ್ರೋ, ಬೇ ಓವಲ್ ಮೈದಾನದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ನಡೆದ ಪಂದ್ಯದಲ್ಲಿ 104 ರನ್ ಗಳಿಸಿದ್ದಾರೆ. ಇದು ಟಿ -20 ಯಲ್ಲಿ ಅವರು ಗಳಿಸಿದ 3 ನೇ ಶತಕವಾಗಿದೆ.

ಟಾಸ್ ಗೆದ್ದು ಮೊದಲಿಗೆ ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ 20 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 243 ರನ್ ಗಳಿಸಿತು. 244 ಗೆಲುವಿನ ಗುರಿ ಪಡೆದ ವೆಸ್ಟ್ ಇಂಡೀಸ್ 16.3 ಓವರ್ ಗಳಲ್ಲಿ 124 ರನ್ ಗಳಿಗೆ ಆಲ್ ಔಟ್ ಆಯಿತು. ಕಾಲಿನ್ ಮನ್ರೋ 53 ಎಸೆತಗಳಲ್ಲಿ 10 ಸಿಕ್ಸರ್, 3 ಬೌಂಡರಿ ನೆರವಿನಿಂದ 104 ರನ್ ಸಿಡಿಸಿದರು. ಈ ಮೂಲಕ ದಾಖಲೆ ಬರೆದರು.

ಟಿ -20 ಯಲ್ಲಿ ನ್ಯೂಜಿಲೆಂಡ್ ನ ಬ್ರೆಂಡನ್ ಮೆಕಲಮ್, ಭಾರತದ ರೋಹಿತ್ ಶರ್ಮಾ, ವೆಸ್ಟ್ ಇಂಡೀಸ್ ನ ಕ್ರಿಸ್ ಗೇಲ್, ವೆಸ್ಟ್ ಇಂಡೀಸ್ ನ ಎವಿನ್ ಲೂಯಿಸ್ ಅವರು ತಲಾ 2 ಶತಕ ಗಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...