alex Certify
ಕನ್ನಡ ದುನಿಯಾ       Mobile App
       

Kannada Duniya

24 ವರ್ಷದ ಆಟಗಾರ ಅಂಡರ್ -19 ಟೀಂ ನ ನಾಯಕ..!

raju-rija

ಇಪ್ಪತ್ತೈದು ವರ್ಷ ವಯಸ್ಸಿನ ಆಟಗಾರ ಅಂಡರ್ 19 ತಂಡದಲ್ಲಿ ಆಡೋದು ಹೇಗೆ ಸಾಧ್ಯ. ಆದ್ರೆ ತಂಡದಲ್ಲಿ ಆಡುವುದಲ್ಲದೇ, ಒಂದು ಟೀಂನ ನಾಯಕ ಕೂಡ ಆಗಿ ವಿವಾದಕ್ಕೆ ಕಾರಣವಾಗಿದ್ದಾರೆ ನೇಪಾಳದ ರಾಜು ರಿಜಾಲ್.

ಬಾಂಗ್ಲಾ ದೇಶದಲ್ಲಿ ನಡೆಯುತ್ತಿರುವ ಅಂಡರ್ 19 ವಿಶ್ವಕಪ್ ನಲ್ಲಿ ನೇಪಾಳ ತಂಡವನ್ನು ರಾಜು ಮುನ್ನೆಡೆಸುತ್ತಿದ್ದಾರೆ. ಸೋಮವಾರ ನಡೆದ ಪಂದ್ಯದ ನಂತರ ಮುಂಬೈ ಆಟಗಾರರೊಬ್ಬರು ರಾಜು ವಿರುದ್ಧ ಆರೋಪ ಮಾಡಿದ್ದಾರೆ. 24-25 ವರ್ಷದ ರಾಜು ಅಂಡರ್ 19 ವಿಶ್ವಕಪ್ ನಲ್ಲಿ ಹೇಗೆ ಆಡ್ತಿದ್ದಾರೆಂದು ಪ್ರಶ್ನಿಸಿದ್ದಾರೆ.

ರಣಜಿ ಆಟಗಾರ ಕೌಸ್ತುಬ್ ಪವಾರ್ ಫೇಸ್ಬುಕ್ ನಲ್ಲಿ ಕಮೆಂಟ್ ಮಾಡಿದ್ದಾರೆ.ನಾವು ಅಂಡರ್ 15ನಲ್ಲಿ ಒಟ್ಟಿಗೆ ಆಡಿದ್ದೇವೆ. ಈಗ ವಯಸ್ಸು 24-25. ಹಾಗಾದ್ರೆ ರಾಜು ಹೇಗೆ ಅಂಡರ್ 19ನಲ್ಲಿ ಬರ್ತಾರೆ ಎಂದು ಕೇಳಿದ್ದಾರೆ. ನೇಪಾಳಕ್ಕೆ ಹೋಗುವ ಮುನ್ನ ರಾಜು ಮುಂಬೈನಲ್ಲಿ ಕ್ರಿಕೆಟ್ ಆಡಿದ್ದರು. ಈ ವೇಳೆ ಅವರ ಹೆಸರು ರಾಜು ರಿಜ್ವಾಲ್ ಬದಲು ರಾಜು ಶರ್ಮಾ ಎಂದಾಗಿತ್ತು. ಇದು ಈಗ ವಿವಾದಕ್ಕೆ ಕಾರಣವಾಗಿದೆ.

ರಾಜು 2000ನೇ ವರ್ಷಾರಂಭದಲ್ಲಿ ಕ್ರಿಕೆಟ್ ಆಡಲು ಉತ್ತರ ಪ್ರದೇಶದಿಂದ ಮುಂಬೈಗೆ ಬಂದಿದ್ದರು. ಹಾಗೆ ಅಂಡರ್ 15 ಟೀಂನಲ್ಲಿ ರಾಜು ಆಟವಾಡಿದ್ದರು. ಮುಂಬೈ ತಂಡದ ನಾಯಕ ಕೂಡ ಆಗಿದ್ದರು. ತಮ್ಮ ಮೇಲಿರುವ ಆರೋಪದ ಬಗ್ಗೆ ನನಗೆ ತಿಳಿದಿಲ್ಲ. ನಾನು ಸಾಮಾಜಿಕ ಜಾಲತಾಣಗಳನ್ನು ನೋಡುವುದಿಲ್ಲ. ಹಾಗೆ ಅದರಲ್ಲಿ ಬಂದ ಕಮೆಂಟ್ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ ಎಂದಿದ್ದಾರೆ ರಾಜು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...