alex Certify
ಕನ್ನಡ ದುನಿಯಾ       Mobile App
       

Kannada Duniya

ಟೀಂ ಇಂಡಿಯಾ ಎರಡನೇ ಟೆಸ್ಟ್ ಗೆಲ್ಲೋದು ಅನುಮಾನ

ವರ್ಷಾರಂಭದಲ್ಲಿಯೇ ಟೀಂ ಇಂಡಿಯಾ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಂಡಿದೆ. ಹಿಂದಿನ ವರ್ಷ ತವರಿನಲ್ಲಿ ಗೆಲುವಿನ ಹಬ್ಬದೂಟವುಂಡಿದ್ದ ಟೀಂ ಇಂಡಿಯಾಕ್ಕೆ ವರ್ಷದ ಮೊದಲ ಪಂದ್ಯದಲ್ಲೇ ಸೋಲುಣ್ಣುವಂತಾಗಿದೆ. ಕೇಪ್ ಟೌನ್ ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಪಂದ್ಯ ಸೋತಿರುವ ಟೀಂ ಇಂಡಿಯಾ ಎರಡನೇ ಪಂದ್ಯದಲ್ಲೂ ಸೋಲಲಿದೆ ಎಂಬ ಅನುಮಾನ ಮೂಡಿದೆ.

ಜನವರಿ 13ರಿಂದ ಸೆಂಚೂರಿಯನ್ ನಲ್ಲಿ ಟೀಂ ಇಂಡಿಯಾ ಎರಡನೇ ಟೆಸ್ಟ್ ಪಂದ್ಯವನ್ನಾಡಲಿದೆ. ಆದ್ರೆ ಎರಡನೇ ಪಂದ್ಯದಲ್ಲೂ ಸೋಲು ಗ್ಯಾರಂಟಿ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಇದಕ್ಕೆ ಮೂಲ ಕಾರಣ ಪಿಚ್.

ಕೆಪ್ ಟೌನ್ ಪಿಚ್ ಗಿಂತ ಸೆಂಚೂರಿಯನ್ ಪಿಚ್ ವೇಗ ಹಾಗೂ ಹೆಚ್ಚು ಬೌನ್ಸ್ ಆಗಲಿದೆ. ಇದನ್ನು ದಕ್ಷಿಣ ಆಫ್ರಿಕಾ ಮಾಧ್ಯಮಗಳೂ ಹೇಳುತ್ತಿವೆ. ವೇಗದ ಬೌಲರ್ ಗಳಿಗೆ ಸಹಾಯವಾಗಲಿ ಎನ್ನುವ ಕಾರಣಕ್ಕೆ ಇಂಥ ಪಿಚ್ ಸಿದ್ಧಪಡಿಸಿದ್ದಾಗಿ ಪಿಚ್ ಕ್ಯುರೇಟರ್ ಬ್ರೈನ್ ಬ್ಲೋಯ್ ಹೇಳಿದ್ದಾರೆ.

ಮೊದಲ ಪಂದ್ಯದಲ್ಲೂ ಭಾರತ ಬ್ಯಾಟಿಂಗ್ ವೈಫಲ್ಯ ಸೋಲಿಗೆ ಕಾರಣವಾಗಿತ್ತು. ಎರಡನೇ ಪಂದ್ಯದಲ್ಲೂ ಇದೇ ಆಗುವ ಸಾಧ್ಯತೆಯಿದೆ. ಎರಡನೇ ಪಂದ್ಯ ಗೆಲ್ಲುವುದು ಕೊಹ್ಲಿ ಬಳಗಕ್ಕೆ ಸವಾಲಿನ ಕೆಲಸವಾಗಿದೆ.

Subscribe Newsletter

Get latest updates on your inbox...

Opinion Poll

  • ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಪಡೆಯುತ್ತಾ ಬಿಜೆಪಿ...?

    View Results

    Loading ... Loading ...