alex Certify
ಕನ್ನಡ ದುನಿಯಾ       Mobile App
       

Kannada Duniya

‘ಸೊನ್ನೆ’ ಸುತ್ತಿದ ಮುರಳಿಗೆ ಸಾಮಾಜಿಕ ತಾಣದಲ್ಲಿ ಕಿಡಿ

ಟೀಮ್ ಇಂಡಿಯಾದ ಸ್ಟಾರ್ ಓಪನರ್ ಮುರಳಿ ವಿಜಯ್, ಲಾರ್ಡ್ಸ್ ಟೆಸ್ಟ್‌ನ ಎರಡೂ ಇನ್ನಿಂಗ್ಸ್ ಗಳಲ್ಲಿ ಸೊನ್ನೆಗೆ ಔಟ್ ಆಗಿದ್ದಾರೆ. ಮುರಳಿ ಶೂನ್ಯಕ್ಕೆ ಔಟ್ ಆಗಿದ್ದಕ್ಕೆ ಅಭಿಮಾನಿಗಳು ಸಾಮಾಜಿಕ ತಾಣದಲ್ಲಿ ಕಾಲೆಳೆದಿದ್ದಾರೆ.

ಲಾರ್ಡ್ಸ್ ಅಂಗಳದಲ್ಲಿ ನಡೆದ ಟೆಸ್ಟ್ ನ ಎರಡನೇ ಇನ್ನಿಂಗ್ಸ್ ನಲ್ಲೂ ಮುರಳಿ ವಿಜಯ್, ಜೇಮ್ಸ್ ಆ್ಯಂಡರ್ಸನ್ ಎಸೆತವನ್ನು ತಪ್ಪಾಗಿ ಗ್ರಹಿಸಿ ಔಟ್ ಆದ್ರು. ಈ ಮೂಲಕ ಮುರಳಿ ವಿಜಯ್ ಟೆಸ್ಟ್‌ನ ಎರಡೂ ಇನ್ನಿಂಗ್ಸ್ ಗಳಲ್ಲೂ ಒಬ್ಬನೇ ಬೌಲರ್ ಗೆ ಔಟ್ ಆಗಿ, ಕಳಪೆ ಆಟ ಮುಂದುವರೆಸಿದ್ದಾರೆ. ಸತತ 10 ಇನ್ನಿಂಗ್ಸ್ ಗಳ ಎರಡನೇ ಇನ್ನಿಂಗ್ಸ್ ನಲ್ಲಿ ರನ್ ಕಲೆ ಹಾಕುವಲ್ಲಿ ಹಿಂದೆ ಬಿದ್ದ ಮುರಳಿ ವಿರುದ್ಧ ಅಭಿಮಾನಿಗಳು ಟೀಕಾ ಪ್ರಹಾರ ಮಾಡಿದ್ದಾರೆ.

ಕಳಪೆ ಬ್ಯಾಟಿಂಗ್ ಗೆ ಬೆಲೆ ತೆತ್ತಿರುವ ಟೀಮ್ ಇಂಡಿಯಾ ಮೊದಲ ಇನ್ನಿಂಗ್ಸ್ ನಲ್ಲಿ 107 ರನ್ ಗೆ ಆಲೌಟ್ ಆಗಿತ್ತು. ಅಲ್ಲದೆ ಎರಡನೇ ಇನ್ನಿಂಗ್ಸ್ ನಲ್ಲೂ ವಿರಾಟ್ ಪಡೆ ರನ್ ಕಲೆ ಹಾಕುವಲ್ಲಿ ಹಿಂದೆ ಬಿದ್ದಿದೆ.

ಜೇಮ್ಸ್ ಆ್ಯಂಡರ್ಸನ್ ಲಾರ್ಡ್ಸ್ ಅಂಗಳದಲ್ಲಿ ಮುರಳಿ ವಿಜಯ್ ವಿಕೆಟ್ ಪಡೆಯುವ ಮೂಲಕ, 150ನೇ ಆರಂಭಿಕನಿಗೆ ಬಲೆ ಬೀಸಿದ ಹೆಗ್ಗಳಿಕೆ ತಮ್ಮದಾಗಿಸಿಕೊಂಡಿದ್ದಾರೆ. ಅಲ್ಲದೆ ಆ್ಯಂಡರ್ಸನ್ ಒಂದೇ ಪಿಚ್‌ನಲ್ಲಿ ನೂರು ವಿಕೆಟ್ ಪಡೆದ ವಿಶ್ವದ ಎರಡನೇ ಬೌಲರ್ ಎನಿಸಿಕೊಂಡಿದ್ದಾರೆ. ಈ ಮೊದಲು ಈ ಸಾಧನೆಯನ್ನು ಶ್ರೀಲಂಕಾದ ಸ್ಪಿನ್ ಮಾಂತ್ರಿಕ ಮುತ್ತಯ್ಯ ಮುರಳೀಧರನ್ ಮಾಡಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...