alex Certify
ಕನ್ನಡ ದುನಿಯಾ       Mobile App
       

Kannada Duniya

ಸಿಎಂ ಬಯಸಿದ್ರೆ ಶಾಸಕನಾಗಿ ಮುಂದುವರೆಯಲು ಸಿದ್ದ ಎಂದ ಸಿದ್ದು

navjot-singh-sidhu-says-if-amarinder-singh-had-asked-him-to-serve-as-an-mla-he-would-have-done-soನವಜೋತ್ ಸಿಂಗ್ ಸಿದ್ದು, ಕ್ಯಾಪ್ಟನ್ ಅಮರೀಂದರ್ ಸಿಂಗ್ ನೇತೃತ್ವದ ಪಂಜಾಬ್ ಸರ್ಕಾರದಲ್ಲಿ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಖಾತೆ ಸಚಿವರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಸಿದ್ದುಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡಲಾಗುತ್ತದೆಂಬ ಮಾತು ಕೇಳಿ ಬಂದಿತ್ತಾದರೂ ಅಂತಿಮವಾಗಿ ಸಚಿವರಾಗಿ ಸಿದ್ದು ನೇಮಕಗೊಂಡಿದ್ದಾರೆ.

ಈ ಸಂದರ್ಭದಲ್ಲಿ ಉಪ ಮುಖ್ಯಮಂತ್ರಿಯಾಗಿ ಆಯ್ಕೆಯಾಗದ ಕುರಿತು ಪ್ರತಿಕ್ರಿಯೆ ನೀಡಿರುವ ನವಜೋತ್ ಸಿಂಗ್ ಸಿದ್ದು, ಮುಖ್ಯಮಂತ್ರಿ ಅಮರೀಂದರ್ ಸಿಂಗ್ ತಮಗೆ ತಂದೆ ಸಮಾನರಾಗಿದ್ದು, ಅವರು ನೀಡಿರುವ ಸಚಿವ ಸ್ಥಾನವನ್ನು ಸಮರ್ಥವಾಗಿ ನಿಭಾಯಿಸುವೆ ಎಂದಿದ್ದಾರೆ. ಮುಖ್ಯಮಂತ್ರಿಗಳು ಬಯಸಿದರೆ ತಾವು ಮಂತ್ರಿ ಸ್ಥಾನ ತ್ಯಜಿಸಿ ಶಾಸಕರಾಗಿ ಮುಂದುವರೆಯಲೂ ಸಿದ್ದ ಎಂದು ಸಿದ್ದು ಘೋಷಿಸಿದ್ದಾರೆ.

ಕಪಿಲ್ ಶರ್ಮಾರ ಕಾಮಿಡಿ ಷೋ ನಲ್ಲಿ ಮುಂದುವರೆಯುವುದರ ಕುರಿತು ಮಾತನಾಡಿದ ಅವರು, ಕಳೆದ 12 ವರ್ಷಗಳಲ್ಲಿ ಆರು ಚುನಾವಣೆಗಳಲ್ಲಿ ಜಯ ಸಾಧಿಸಿದ್ದೇನೆ. ಈ ಅವಧಿಯಲ್ಲಿ ಕೂಡಾ ಶೋ ನಲ್ಲಿ ಭಾಗಿಯಾಗಿದ್ದು, ಸಾರ್ವಜನಿಕ ಕಾರ್ಯಗಳಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಂಡಿದ್ದೇನೆ ಎಂದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...