alex Certify
ಕನ್ನಡ ದುನಿಯಾ       Mobile App
       

Kannada Duniya

ಪಾಕ್‌ ಗೆ ತೆರಳಿದ ನವಜೋತ್ ಸಿಂಗ್‌ ಸಿದ್ದು

ಭಾರತ ತಂಡದ ಮಾಜಿ ಕ್ರಿಕೆಟ್‌ ಆಟಗಾರ, ಪಂಜಾಬ್‌ ಸಚಿವ ನವಜೋತ್‌ ಸಿಂಗ್‌ ಸಿದ್ದು, ಪಾಕಿಸ್ತಾನ ತಲುಪಿದ್ದಾರೆ. ಪಾಕ್‌ ನಿಯೋಜಿತ ಪ್ರಧಾನಿ ಇಮ್ರಾನ್‌ ಖಾನ್‌ ಶನಿವಾರ ಪ್ರಧಾನ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದು, ಕಾರ್ಯಕ್ರಮದಲ್ಲಿ ಸಿದ್ದು ಪಾಲ್ಗೊಳ್ಳಲಿದ್ದಾರೆ.

ಪ್ರಮಾಣ ವಚನ ಸಮಾರಂಭದಲ್ಲಿ ಪಾಲ್ಗೊಳ್ಳುವಂತೆ ಇಮ್ರಾನ್‌ ಖಾನ್‌ ಅವರ ಆಹ್ವಾನ ಸ್ವೀಕರಿಸಿದ ಸಿದ್ದು, ಪಾಕ್‌ಗೆ ಪ್ರಯಾಣ ಬೆಳೆಸಿದ್ದಾರೆ. ಸಮಕಾಲೀನ ಆಟಗಾರರಾದ ಕಪಿಲ್‌ ದೇವ್‌ ಹಾಗೂ ಸುನಿಲ್‌ ಗಾವಸ್ಕರ್‌ ಅವರಿಗೂ ಇಮ್ರಾನ್‌ ಖಾನ್‌ ಆಹ್ವಾನ ನೀಡಿದ್ದರು. ಆದರೆ ಭಾರತ ಹಾಗೂ ಪಾಕ್‌ ನಡುವಿನ ಸಂಬಂಧ ಉತ್ತಮ ಸ್ಥಿತಿಯಲ್ಲಿ ಇಲ್ಲದೇ ಇರುವುದರಿಂದ ಇಬ್ಬರು ಆಟಗಾರರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿಲ್ಲ ಎನ್ನಲಾಗಿದೆ.

ಈ ವೇಳೆ ಸಿದ್ದು, ಇಮ್ರಾನ್‌ ಖಾನ್‌ ಒಬ್ಬ ಉತ್ತಮ ಕ್ರೀಡಾಪಟುವಾಗಿದ್ದು, ಉಭಯ ದೇಶಗಳ ನಡುವಿನ ಸಂಬಂಧ ಉತ್ತಮಗೊಳಿಸುವಲ್ಲಿ ಅಗತ್ಯ ಕ್ರಮ ಕೈಗೊಳ್ಳುವ ನಂಬಿಕೆ ಇದೆ. ಈ ಹಿನ್ನೆಲೆಯಲ್ಲೇ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿರುವುದಾಗಿ ಗೃಹ ಇಲಖೆಗೆ ಮಾಹಿತಿ ರವಾನಿಸಿದ್ದಾರೆ. ಸಿದ್ದು ನಿರ್ಧಾರಕ್ಕೆ ಬಿಜೆಪಿಯ ಸುಬ್ರಹ್ಮಣ್ಯಂ ಸ್ವಾಮಿ ಸೇರಿ ಅನೇಕರು ಬೆಂಬಲ ಸೂಚಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...