alex Certify
ಕನ್ನಡ ದುನಿಯಾ       Mobile App
       

Kannada Duniya

ಶಾಕಿಂಗ್! ಹಾಕಿ ಆಟಗಾರ್ತಿಯರನ್ನು ಅತಂತ್ರರನ್ನಾಗಿಸಿದ ಕ್ರೀಡಾ ಪ್ರಾಧಿಕಾರ

ಆಸ್ಟ್ರೇಲಿಯಾದಲ್ಲಿ ನಡೆದ ಪೆಸಿಪಿಕ್ ಸ್ಕೂಲ್ ಗೇಮ್ಸ್ ನಲ್ಲಿ ಭಾರತದ ಮಹಿಳಾ ಹಾಕಿ ತಂಡಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸದೇ ಇರುವ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿರುವ ವಿಡಿಯೋ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆಸ್ಟ್ರೇಲಿಯಾಕ್ಕೆ ತೆರಳಲು ಕೋಚ್ ಪ್ರದೀಪ್ ಕುಮಾರ್ ಹಾಗೂ ತಂಡಕ್ಕೆ ಸರ್ಕಾರ ಅನುಮತಿಯನ್ನೇ ಕೊಟ್ಟಿರಲಿಲ್ಲ ಅಂತಾ ಕ್ರೀಡಾ ಪ್ರಾಧಿಕಾರ ಹೇಳ್ತಿದೆ.

ಈ ಬಗ್ಗೆ ತನಿಖೆ ನಡೆಸುವಂತೆ ಕ್ರೀಡಾ ಸಚಿವ ರಾಜ್ಯವರ್ಧನ ಸಿಂಗ್ ರಾಥೋಡ್ ಆದೇಶಿಸಿದ್ದಾರೆ. ಭಾರತೀಯ ಅಧಿಕಾರಿಗಳು ತಮ್ಮನ್ನು ಕಡೆಗಣಿಸಿರುವುದನ್ನು ಖಂಡಿಸಿ ಹಾಕಿ ತಂಡ ಪ್ರತಿಭಟನೆ ನಡೆಸಿತ್ತು. ಅಧಿಕಾರಿಗಳು ಪಂದ್ಯದ ವೇಳಾಪಟ್ಟಿಯ ಬಗ್ಗೆಯೇ ಮಾಹಿತಿ ನೀಡದೇ ಇದ್ದಿದ್ರಿಂದ ಮ್ಯಾಚ್ ಮಿಸ್ ಆಗಿದೆ ಅಂತಾನೂ ಆಟಗಾರ್ತಿಯರು ದೂರಿದ್ದರು.

ಪಂದ್ಯದ ಸ್ಥಳ ತಲುಪಲು ತಂಡಕ್ಕೆ ಸಾರಿಗೆ ವ್ಯವಸ್ಥೆ ಮಾಡಿರಲಿಲ್ಲ. ಅವರೇ ಕ್ಯಾಬ್ ಬುಕ್ ಮಾಡಿಕೊಂಡು ಹೋಗಬೇಕಾಯ್ತು. ಆದ್ರೆ ಇದರಲ್ಲಿ ತಪ್ಪು ತಮ್ಮದಲ್ಲ ಅನ್ನೋದು ಕ್ರೀಡಾ ಪ್ರಾಧಿಕಾರದ ವಾದ. ಹಾಕಿ ತಂಡಕ್ಕೆ ಆಸ್ಟ್ರೇಲಿಯಾಕ್ಕೆ ತೆರಳಲು ಕ್ರೀಡಾ ಪ್ರಾಧಿಕಾರ ಅಥವಾ ಹಾಕಿ ಇಂಡಿಯಾ ಅನುಮತಿ ನೀಡದೇ ಇರುವುದರಿಂದ ಇದರಲ್ಲಿ ಅಧಿಕಾರಿಗಳ ನಿರ್ಲಕ್ಷ್ಯದ ಪ್ರಶ್ನೆಯೇ ಇಲ್ಲ ಎಂದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...