alex Certify
ಕನ್ನಡ ದುನಿಯಾ       Mobile App
       

Kannada Duniya

ಹೆಣ್ಣು ಹೆತ್ತಿದ್ದಕ್ಕೆ ಕ್ರೀಡಾತಾರೆಗೆ ತಲಾಖ್

talak

ನವದೆಹಲಿ: ದೇಶದಲ್ಲಿ ತಲಾಖ್ ಕುರಿತಾಗಿ ವ್ಯಾಪಕವಾಗಿ ಚರ್ಚೆಯಾಗುತ್ತಿದೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೂಡ ಇದರ ಬಗ್ಗೆ ದನಿ ಎತ್ತಿದ್ದಾರೆ.

ಉತ್ತರ ಪ್ರದೇಶದಲ್ಲಿಯೇ ಹೆಣ್ಣು ಮಗುವಿಗೆ ಜನ್ಮ ನೀಡಿದ ಕಾರಣಕ್ಕೆ ಕ್ರೀಡಾಪಟುವಿಗೆ ಆಕೆಯ ಪತಿರಾಯ ತಲಾಖ್ ನೀಡಿದ್ದಾನೆ.

ಅಮ್ರೋಹಾ ನಿವಾಸಿಯಾಗಿರುವ ರಾಷ್ಟ್ರೀಯ ನೆಟ್ ಬಾಲ್ ಆಟಗಾರ್ತಿ ಶ್ಯುಮ್ಲಾ ಜಾವೇದ್ ಹೆಣ್ಣುಮಗುವಿಗೆ ಜನ್ಮ ನೀಡಿದ್ದಾರೆ. ಇದೇ ಕಾರಣಕ್ಕೆ ಆಕೆಯ ಪತಿ ತಲಾಖ್ ನೀಡಿದ್ದಾನೆ.

ಶನಿವಾರವಷ್ಟೇ ಉತ್ತರ ಪ್ರದೇಶದಲ್ಲಿ ಹೆಣ್ಣುಮಗುವಿಗೆ ಜನ್ಮ ನೀಡಿದ ಮಹಿಳೆಗೆ ಆಕೆಯ ಪತಿರಾಯ ತಲಾಖ್ ನೀಡುವ ಬೆದರಿಕೆ ಹಾಕಿದ್ದು, ಭಾರೀ ಸುದ್ದಿಯಾಗಿತ್ತು.

ಈಗ ರಾಷ್ಟ್ರೀಯ ನೆಟ್ ಬಾಲ್ ಚಾಂಪಿಯನ್ ಕೂಡ ಇದರಿಂದ ಹೊರತಾಗಿಲ್ಲ. ಆಕೆಯ ಪತಿ ಫೋನ್ ನಲ್ಲೇ ತಲಾಖ್ ನೀಡಿದ್ದಾನೆ ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...