alex Certify
ಕನ್ನಡ ದುನಿಯಾ       Mobile App
       

Kannada Duniya

ಶಾಕಿಂಗ್: ಭಿಕ್ಷೆ ಬೇಡುತ್ತಿದ್ದಾರೆ ಪದಕ ವಿಜೇತ ಕ್ರೀಡಾಪಟು

ವಿಶೇಷ ಒಲಿಂಪಿಕ್ ನಲ್ಲಿ ಪದಕ ಸಾಧನೆ ಮಾಡಿದ್ದ ವಿಕಲಚೇತನ ಕ್ರೀಡಾಪಟು, ಸರ್ಕಾರಿ ಕೆಲಸ ಸಿಗದೆ, ಮಧ್ಯ ಪ್ರದೇಶದ ಭೂಪಾಲದಲ್ಲಿ ಭಿಕ್ಷಾಟನೆ ನಡೆಸುತ್ತಿದ್ದಾರೆ.

ಅಹಮದಾಬಾದ್ ನಲ್ಲಿ ನಡೆದಿದ್ದ ವಿಶೇಷ ಒಲಿಂಪಿಕ್ ಭಾರತ-2017 ರ 100 ಮೀಟರ್ ಓಟದ ಸ್ಪರ್ಧೆಯಲ್ಲಿ ಮನ್ ಮೋಹನ್ ಸಿಂಗ್ ಲೋಧಿಯಾ ಬೆಳ್ಳಿ ಸಾಧನೆ ಮಾಡಿದ್ದರು.

ದಶಕದ ಹಿಂದೆ ಬಲಗೈ ಕಳೆದುಕೊಂಡಿದ್ದ ಲೋಧಿಯಾಗೆ, ಮಧ್ಯ ಪ್ರದೇಶ ಸರ್ಕಾರ ಕೆಲಸ ನೀಡುವ ಭರವಸೆ ನೀಡಿತ್ತು. ಆದ್ರೆ, ಈವರೆಗೆ ಕೆಲಸ ಸಿಗದೆ ಇರೋದ್ರಿಂದ ಹತಾಶರಾದ ಲೋಧಿಯಾ ಬೀದಿಗಳಲ್ಲಿ ತಾವು ಪಡೆದ ಪ್ರಶಸ್ತಿ ಹಾಗೂ ಪದಕಗಳನ್ನು ತೋರಿಸಿ ಭಿಕ್ಷಾಟನೆ ನಡೆಸಿದ್ದಾರೆ.

ಸರ್ಕಾರಿ ನೌಕರಿಗಾಗಿ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ರನ್ನು ಭೇಟಿಯಾಗಿ ಮನವಿ ನೀಡಿದ್ದೆವು. ಮುಖ್ಯಮಂತ್ರಿಗಳು ಪರಿಗಣನೆ ನಡೆಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ರು. ಆದ್ರೆ, ಈತನಕ ಸರ್ಕಾರಿ ಕೆಲಸ ದಕ್ಕಿಲ್ಲ. ಕುಟುಂಬದ ನಿರ್ವಹಣೆಯ ಹೊಣೆ ನನ್ನ ಮೇಲಿದೆ ಎಂದು ಲೋಧಿಯಾ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ಕ್ರೀಡಾ ಇಲಾಖೆ ಈ ಬಗ್ಗೆ ಸ್ಪಷ್ಟಿಕರಣ ನೀಡಿದ್ದು, ನಮ್ಮ ವ್ಯಾಪ್ತಿಗೆ ಈ ಪ್ರಕರಣ ಬರುವುದಿಲ್ಲ. ಸಾಮಾಜಿಕ ನ್ಯಾಯ ಇಲಾಖೆ ಅಡಿ ಬರುತ್ತದೆ ಎಂದು ತಿಳಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...