alex Certify
ಕನ್ನಡ ದುನಿಯಾ       Mobile App
       

Kannada Duniya

ಕಬಡ್ಡಿ ಆಟಗಾರ್ತಿಗೆ ಮದುವೆ ಮಾಡಿಸಲು ಹೆತ್ತವರು ಮಾಡಿದ್ದೇನು…?

ಮದುವೆಯಾಗುವಂತೆ ಪೋಷಕರು ಒತ್ತಡ ಹೇರುತ್ತಿದ್ದಾರೆ ಅಂತಾ ರಾಷ್ಟ್ರಮಟ್ಟದ ಕಬಡ್ಡಿ ಆಟಗಾರ್ತಿ ಪ್ರೀತಿ ದೂರು ನೀಡಿದ್ದಾರೆ. ಶಿಕ್ಷಣ ಹಾಗೂ ಕ್ರೀಡೆಯಲ್ಲಿ ಇನ್ನಷ್ಟು ಸಾಧನೆ ಮಾಡಬೇಕು ಅನ್ನೋದು ಪ್ರೀತಿಯ ಆಸೆ. ಸದ್ಯ ಆಕೆ ರೋಹ್ಟಕ್ ನ ವೈಶ್ ಕಾಲೇಜಿನಲ್ಲಿ ಬಿ.ಎ ಮಾಡ್ತಿದ್ದಾಳೆ.

ಪ್ರೀತಿಯ ಹೆತ್ತವರು ಕಳೆದ 4 ವರ್ಷಗಳಿಂದ ಕರ್ನಲ್ ನಲ್ಲಿ ನೆಲೆಸಿದ್ದಾರೆ. 2017ರ ಸಪ್ಟೆಂಬರ್ ನಲ್ಲಿ ರೋಹ್ಟಕ್ ಗೆ ಬಂದ ತಂದೆ, ಪ್ರೀತಿಯನ್ನು ಬಲವಂತವಾಗಿ ಕರ್ನಲ್ ಗೆ ಕರೆದೊಯ್ದಿದ್ದಾರಂತೆ. ಅಲ್ಲಿ ವಯಸ್ಸಾದ ವ್ಯಕ್ತಿಯೊಂದಿಗೆ ಪ್ರೀತಿಯ ವಿವಾಹ ನಿಶ್ಚಯ ಮಾಡಿದ್ದಾರೆ.

ಪ್ರೀತಿ ವಿರೋಧ ವ್ಯಕ್ತಪಡಿಸಿದಾಗ ಹಲವು ದಿನಗಳ ಕಾಲ ಆಕೆಯನ್ನು ಕೋಣೆಯಲ್ಲಿ ಕೂಡಿ ಹಾಕಿದ್ದಾರಂತೆ. ತನಗೆ ಸಹಾಯ ಮಾಡುವಂತೆ ಮಹಿಳಾ ಆಯೋಗ, ಹರಿಯಾಣ ಸಿಎಂ ಮನೋಹರ್ ಲಾಲ್ ಖಟ್ಟರ್, ಡಿಜಿಪಿ ಹಾಗೂ ಎಸ್ ಪಿಗೆ ಪ್ರೀತಿ ಪತ್ರ ಬರೆದಿದ್ದಾಳೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...