alex Certify
ಕನ್ನಡ ದುನಿಯಾ       Mobile App
       

Kannada Duniya

ಪೊದೆಗಳ ಮಧ್ಯೆ ಹೆಣವಾಗಿ ಪತ್ತೆಯಾದ ರಾಷ್ಟ್ರೀಯ ಕ್ರೀಡಾಪಟು

ಭಾರತೀಯ ರೈಲ್ವೆ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ರಾಷ್ಟ್ರೀಯ ಮಟ್ಟದ ಅಥ್ಲೀಟ್ ಅದಿತ್ಯ ವಿಜಯ್ ಕೋಟ್ ಮೃತದೇಹ ಕೊಲ್ಲಾಪುರದ ಬೆಟ್ಟವೊಂದರಲ್ಲಿ ಪತ್ತೆಯಾಗಿದೆ. ಆದಿತ್ಯ ವಿಜಯ್ ಮೃತದೇಹ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಆದಿತ್ಯ ರಾಯ್ ಕೊಲೆ ಹೇಗಾಯ್ತು..? ಯಾರು ಕೊಲೆ ಮಾಡಿದ್ರು ಅನ್ನೋ ಬಗ್ಗೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಪೊಲೀಸರ ಅನುಮಾನದ ಪ್ರಕಾರ ಅತ್ಯಾಚಾರಕ್ಕೊಳಗಾಗಿದ್ದ ಯುವತಿಯೊಬ್ಬರಿಗೆ ಹಣಕಾಸಿನ ನೆರವು ಒದಗಿಸಿದ ಕಾರಣಕ್ಕಾಗಿ ಆದಿತ್ಯ ಕೊಲೆಯಾಗಿರಬಹುದು ಅಂತ ಹೇಳಲಾಗ್ತಿದೆ.

ಆದಿತ್ಯ ತಾಯಿ ಸ್ಥಳೀಯವಾಗಿ ಚಿಕ್ಕ ಟೈಲರಿಂಗ್ ಕ್ಲಾಸ್ ಒಂದನ್ನ ನಡೆಸ್ತಿದ್ದಾರೆ. ರೈಲ್ವೇ ಇಲಾಖೆಯಲ್ಲಿ ಕೆಲಸ ಮಾಡ್ತಿದ್ದ ಅವರ ತಂದೆ ಕೆಲ ವರ್ಷಗಳ ಹಿಂದೆ ಮೃತಪಟ್ಟಿದ್ದರು. ಅನುಕಂಪದ ಆಧಾರದ ಮೇಲೆ ತಂದೆಯ ಕೆಲಸವನ್ನೇ ಆದಿತ್ಯ ಅವರಿಗೆ ಕೊಡಲಾಗಿತ್ತು. ಜುಲೈ 17ರಂದು ಸ್ನೇಹಿತರೊಬ್ಬರ ಹುಟ್ಟುಹಬ್ಬದ ಪಾರ್ಟಿಗೆ ಹೋಗಿ ಬರ್ತೀನಿ ಅಂತ ಹೇಳಿ ಆದಿತ್ಯ ಮನೆಯಿಂದ ಹೊರಗೆ ಹೋಗಿದ್ದ. ಆನಂತರದಲ್ಲಿ ಆತ ಮನೆಗೆ ವಾಪಸ್ಸಾಗಿರಲಿಲ್ಲ. ಅಂದಿನಿಂದಲೂ ಆತನ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಹಾಗಾಗಿ ತಾಯಿ ಪೊಲೀಸ್ ಠಾಣೆಗೆ ತೆರಳಿ ಮಗನನ್ನು ಹುಡುಕಿ ಕೊಡಿ ಅಂತ ದೂರು ನೀಡಿದ್ದರು.

ಆ ಪ್ರಕಾರ ಆದಿತ್ಯನನ್ನು ಹುಡುಕೋಕೆ ನಿಂತ ಪೊಲೀಸರಿಗೆ ಆತನ ಶವ ಸಿಕ್ಕಿದೆ. ಪೊಲೀಸರು ಪ್ರಕರಣವನ್ನ ನಾನಾ ನಿಟ್ಟಿನಲ್ಲಿ ನೋಡುವ ಕೆಲಸ ಮಾಡ್ತಿದ್ದಾರೆ. 2017ರಲ್ಲಿ ಅಪ್ರಾಪ್ತ ಯುವತಿಯನ್ನು ಅತ್ಯಾಚಾರ ಮಾಡಿದ ಯುವಕನೊಬ್ಬನನ್ನ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದರು. ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ಆತ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದ. ಆತನಿಂದಲೇ ಆದಿತ್ಯ ರಾಯ್ ಕೊಲೆಯಾಗಿರಬಹುದು ಅಂತ ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...