alex Certify
ಕನ್ನಡ ದುನಿಯಾ       Mobile App
       

Kannada Duniya

ಗಿನ್ನಿಸ್ ದಾಖಲೆ ಮಾಡಿದ ಕ್ರಿಕೆಟ್ ಆಟಗಾರ

35FC296000000578-0-image-a-4_1467753764199

ಇಂಗ್ಲೆಂಡಿನ ಮಾಜಿ ಕ್ಯಾಪ್ಟನ್ ನಾಸಿರ್ ಹುಸೇನ್ ಅವರ ಕ್ಯಾಚ್ ‘ಗಿನ್ನಿಸ್ ಬುಕ್ ಆಫ್ ರೆಕಾರ್ಡ್’ ನಲ್ಲಿ ದಾಖಲಾಗಿದೆ.

ಜುಲೈ 14 ರಂದು ಇಂಗ್ಲೆಂಡ್ ಮತ್ತು ಪಾಕಿಸ್ತಾನಗಳ ನಡುವೆ ನಡೆಯಲಿರುವ ಟೆಸ್ಟ್ ಮ್ಯಾಚ್ ಹಿನ್ನಲೆಯಲ್ಲಿ ಲಾರ್ಡ್ಸ್ ಮೈದಾನದಲ್ಲಿ ಒಂದು ಸ್ಪರ್ಧೆ ಏರ್ಪಡಿಸಲಾಗಿತ್ತು. ಅಲ್ಲಿ 48 ವರ್ಷದ ನಾಸಿರ್ ಅವರು ಅತೀ ಎತ್ತರದ ಕ್ಯಾಚ್ ಹಿಡಿಯುವ ಮೂಲಕ ಗಿನ್ನಿಸ್ ದಾಖಲೆ ಮಾಡಿದರು.

ಬ್ಯಾಟ್ ಕ್ಯಾಮ್ ಡ್ರೋನ್ ಸಹಾಯದಿಂದ ಬಾಲನ್ನು 150 ಅಡಿ ಎತ್ತರದಿಂದ ಬೀಳಿಸಲಾಗಿತ್ತು ಇದನ್ನು ನಾಸಿರ್ ಅವರು ಹಿಡಿದರು. ಈ ಸ್ಪರ್ಧೆಯಲ್ಲಿ ನಾಸಿರ್ ಅವರಿಗೆ ಮೂರು ಅವಕಾಶ ಕೊಡಲಾಗಿತ್ತು. ಮೊದಲ ಬಾರಿ ಡ್ರೋನ್ 100 ಅಡಿ ಎತ್ತರದಲ್ಲಿತ್ತು. ಎರಡು ಹಾಗೂ ಮೂರನೇ ಬಾರಿ ಇದನ್ನು 150 ಕ್ಕೆ ಹೆಚ್ಚಿಸಲಾಗಿತ್ತು. ಈ ಚೆಂಡನ್ನು ನಾಸಿರ್ ಅವರು ಹಿಡಿದರು. ಇಂಗ್ಲೆಂಡ್ ಪರ ನಾಸಿರ್ ಹುಸೇನ್ 96 ಪಂದ್ಯಗಳನ್ನಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...