alex Certify
ಕನ್ನಡ ದುನಿಯಾ       Mobile App
       

Kannada Duniya

ಟೀಂ ಇಂಡಿಯಾ ಸೋಲಿಗೆ ಕಾರಣರಾದ್ರಾ ನಾಯಕ ವಿರಾಟ್ ಕೊಹ್ಲಿ?

ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತದ ಸೋಲಿಗೆ ನಾಯಕ ವಿರಾಟ್ ಕೊಹ್ಲಿ ಕಾರಣವೆಂದು ಇಂಗ್ಲೆಂಡಿನ ಮಾಜಿ ನಾಯಕ ನಾಸಿರ್ ಹುಸೇನ್ ಆರೋಪಿಸಿದ್ದಾರೆ. ಈ ಸೋಲಿಗೆ ವಿರಾಟ್ ಕೊಹ್ಲಿ ಹೇಗೆ ಕಾರಣ ಎಂಬುದನ್ನೂ ಅವರು ಬಿಚ್ಚಿಟ್ಟಿದ್ದಾರೆ.

ಇಂಗ್ಲೆಂಡ್ ಒಂದು ಹಂತದಲ್ಲಿ 87 ರನ್ನುಗಳಿಗೆ 7 ವಿಕೆಟ್ ಕಳೆದುಕೊಂಡು ಹೀನಾಯ ಸ್ಥಿತಿಯಲ್ಲಿತ್ತು. ಹಾಗೂ ಅಶ್ವಿನ್ ಅವರು ಅತ್ಯುತ್ತಮವಾಗಿ ಬೌಲಿಂಗನ್ನು ಮಾಡುತ್ತಿದ್ದರು, ಈ ಸಂದರ್ಭದಲ್ಲಿ ವಿರಾಟ್ ಕೊಹ್ಲಿ, ಅಶ್ವಿನ್ ಅವರನ್ನು ಒಂದು ಗಂಟೆ ಕ್ರೀಡಾಂಗಣದಿಂದ ಹೊರಗಿರಲು ಅವಕಾಶ ಕೊಟ್ಟಿದ್ದು ಭಾರತದ ಸೋಲಿಗೆ ಕಾರಣ ಎಂದು ನಾಸಿರ್ ಹುಸೇನ್ ತಿಳಿಸಿದ್ದಾರೆ.

ಅಶ್ವಿನ್ ಅವರ  ಅನುಪಸ್ಥಿತಿಯ ಲಾಭ ಪಡೆದ ಇಂಗ್ಲೆಂಡಿನ ಯುವ ಆಟಗಾರ ಸ್ಯಾಮ್ ಕರೆನ್, 65 ಎಸೆತಗಳಲ್ಲಿ 63 ರನ್ ಪೇರಿಸಿದರು. ಇದರಲ್ಲಿ 9 ಬೌಂಡರಿ ಹಾಗೂ 2 ಸಿಕ್ಸರ್ ಒಳಗೊಂಡಿದೆ.

ಇಂಗ್ಲೆಂಡಿನ ಮಾಜಿ ನಾಯಕ ನಾಸಿರ್ ಹುಸೇನ್ ಪ್ರಕಾರ, ಈ ಸಮಯದಲ್ಲಿ ಅಶ್ವಿನ್ ಅವರಿಗೆ ಬೌಲಿಂಗ್ ಮಾಡಲು ಅವಕಾಶ ಕೊಟ್ಟಿದ್ದರೆ ಇಂಗ್ಲೆಂಡ್ ಆಟಗಾರನನ್ನು ಕಟ್ಟಿಹಾಕಲು ಸಾಧ್ಯವಾಗುತ್ತಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...